ರಾಷ್ಟ್ರೀಯ

ಮೃತ ಮಗನ ವೀರ್ಯದಿಂದ ಮೊಮ್ಮಕ್ಕಳನ್ನು ಪಡೆದ ದಂಪತಿ

Pinterest LinkedIn Tumblr


ಪುಣೆ: ಅವಿವಾಹಿತ ಮೃತ ಮಗನ ಸಂರಕ್ಷಿತ ವೀರ್ಯದಿಂದ ಮಹಾರಾಷ್ಟ್ರದ ದಂಪತಿ ಅವಳಿ ಮೊಮ್ಮಕ್ಕಳನ್ನು ಪಡೆದಿದ್ದಾರೆ. ದಂಪತಿಯ ಸಂಬಂಧಿ ಬಾಡಿಗೆ ತಾಯಿಯಾಗಿ, ಗರ್ಭಧರಿಸಿ ಕಳೆದ 12ರಂದು ಗಂಡು ಹಾಗೂ ಹೆಣ್ಣುವಿಗೆ ಜನ್ಮ ನೀಡಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಮಹಿಳೆಯ ಮಗ ಉನ್ನತ ಶಿಕ್ಷಣಕ್ಕೆಂದು ಜರ್ಮನಿಗೆ ತೆರಳಿದ್ದ. 2013ರಲ್ಲಿ ಜರ್ಮನಿಯಲ್ಲೇ ಬ್ರೈನ್‌ ಟ್ಯೂಮರ್‌ ಕಾಣಿಸಿ ಕೊಂಡು, ಕಿಮೊಥೆರಪಿಯ ಪರಿಣಾಮ ಆತನಿಗೆ ಬಂಜೆತನ ಉಂಟಾಗಬಹು ದೆಂಬ ಭಯದಲ್ಲೇ ವೈದ್ಯರು ಆತನ ವೀರ್ಯವನ್ನು ಸಂರಕ್ಷಿಸಿದ್ದರು.

2013ರ ಮೇನಲ್ಲಿ ಮಗನನ್ನು ಜರ್ಮನಿಯಿಂದ ಮರಳಿ ಭಾರತಕ್ಕೆ ಕರೆದು ಕೊಂಡು ಬಂದು ಮುಂಬೈನಲ್ಲಿ ಚಿಕಿತ್ಸೆ ಕೊಡಿಸಿ, ಆಪ ರೇಷನ್‌ ಸಹ ಮಾಡಿಸಲಾಗಿತ್ತು. ಇದರಿಂದ ಆಗ ಮಗ ಚೇತರಿಸಿ ಕೊಂಡಿದ್ದ. ಆದರೆ, ಎರಡು ವರ್ಷದ ಬಳಿಕ ಮತ್ತೆ ಹಳೆ ಸಮಸ್ಯೆ ತಲೆದೋರಿ, ಬಾಯಿಯಲ್ಲಿ ರಕ್ತ ಸೋರಿಕೆಯಿಂದ ಮಗ ತನ್ನ ದನಿ ಕಳೆದುಕೊಂಡಿದ್ದ. ಕೊನೆಗೆ 2016ರಲ್ಲಿ ಮೃತಪಟ್ಟಿದ್ದ.

Comments are closed.