ಮುಂಬಯಿ : ಜಿಯಾ ಖಾನ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಸೂರಜ್ ಪಾಂಚೋಲಿ ವಿರುದ್ಧ ಇಲ್ಲಿ ಸೆಶನ್ಸ್ ನ್ಯಾಯಾಲಯ ದೋಷಾರೋಪ ಹೊರಿಸಿದೆ.
ಐಪಿಸಿ ಸೆ.306ರ ಪ್ರಕಾರ 27ರ ಹರೆಯದ ಸೂರಜ್ ಪಾಂಚೋಲಿ ವಿರುದ್ಧ ನ್ಯಾಯಾಧೀಶ ಕೆ ಡಿ ಶಿರಭತೆ ಅವರು ದೋಷಾರೋಪ ಹೊರಿಸಿದರು.
ಸೂರಜ್ ಪಾಂಚೋಲಿ ತನ್ನ ಮುಗ್ಧನೆಂದು ಕೋರ್ಟಿನಲ್ಲಿ ನಿವೇದಿಸಿಕೊಂಡಿದ್ದಾರೆ. ಸಾಕ್ಷ್ಯಗಳ ವಿಚಾರಣೆಯು ಫೆ.14ರಿಂದ ಆರಂಭವಾಗುತ್ತದೆ ಎಂದು ಪಾಂಚೋಲಿ ಅವರ ವಕೀಲ ಪ್ರಶಾಂತ್ ಪಾಟೀಲ್ ಹೇಳಿದರು.
-ಉದಯವಾಣಿ