ಮುಂಬೈ

2019ರ ಲೋಕಸಭೆ, ವಿಧಾನಸಭೆ ಚುನಾವಣೆ ಸ್ವತಂತ್ರವಾಗಿ ಎದುರಿಸಲು ಶಿವಸೇನೆ ನಿರ್ಧಾರ

Pinterest LinkedIn Tumblr


ಮುಂಬೈ: ಬಿಜೆಪಿಯ ಬಹುಕಾಲದ ಮಿತ್ರ ಪಕ್ಷ ಶಿವಸೇನೆ ಮುಂಬರುವ ವಿಧಾನಸಭೆ ಹಾಗೂ 2019ರ ಲೋಕಸಭೆಯ ಚುನಾವಣೆಯನ್ನು ಸ್ವತಂವಾಗಿ ಎದುರಿಸಲು ನಿರ್ಧರಿಸಿದೆ.

ಮಂಗಳವಾರ ಇಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಮಾತನಾಡಿದ ಪಕ್ಷದ ಹಿರಿಯ ನಾಯಕ ಸಂಜಯ್​ ರೌತ್​ ಈ ನಿರ್ಧಾರವನ್ನು ತಿಳಿಸಿದರು. ಆದರೆ, ಸದ್ಯ ಬಿಜೆಪಿಗೆ ನೀಡಿರುವ ಬೆಂಬಲವನ್ನು ಪಕ್ಷ ಮುಂದು ವರಿಸಲಿದೆ. ಒಂದು ವೇಳೆ ಬೆಂಬಲವನ್ನು ಹಿಂತೆಗೆದುಕೊಂಡರೆ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್​ ಸರ್ಕಾರ ಅಲ್ಪ ಮತಕ್ಕೆ ಕುಸಿಯುತ್ತದೆ.

ಮುಂಬರುವ ಲೋಕ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಎಲ್ಲ ರಾಜ್ಯದಿಂದ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯಲಿದೆ ಎಂದು ಪಕ್ಷದ ಅಧ್ಯಕ್ಷ ಉದ್ಧವ್​ ಠಾಕ್ರೆ ಹೇಳಿದರು.
ಕಾರ್ಯಕಾರಿಣಿ ಸಭೆಯಲ್ಲಿ ಉದ್ಧವ್​ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಯನ್ನು ಕಾರ್ಯಕಾರಿಣಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಮಧ್ಯಾಹ್ನ ನಡೆಯಲಿರುವ ಕಾರ್ಯಕ್ರಮದಲ್ಲಿ ಉದ್ಧವ್​ ಠಾಕ್ರೆ ಪಕ್ಷದ ಅಧ್ಯಕ್ಷರಾಗಿ ಮರು ಆಯ್ಕೆ ಆಗಲಿದ್ದಾರೆ.

Comments are closed.