ಕರ್ನಾಟಕ

ಹೆಂಗಸರ ಜತೆ ಮಲಗಿದ್ದೆ ಎಂದು ಒಪ್ಪಿಕೊಂಡ ಕಲ್ಮಠ ಸ್ವಾಮಿ

Pinterest LinkedIn Tumblr


ಕೊಪ್ಪಳ: ಗಂಗಾವತಿಯ ಕಲ್ಮಠ ಸ್ವಾಮೀಜಿ ಲಾಡ್ಜ್‌ವೊಂದರಲ್ಲಿ ಮಹಿಳೆಯ ಜೊತೆಯಿದ್ದ ವೀಡಿಯೋ ಬಿಡುಗಡೆಯಾದ ಬಳಿಕ ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದೆ.

ಗಂಗಾವತಿ ಕಲ್ಮಠದ ಡಾ. ಕೊಟ್ಟೂರೇಶ್ವರ ಸ್ವಾಮಿ ಸ್ವತಃ ತಾನು ಹೆಂಗಸರ ಜತೆಗೆ ಮಲಗಿದ್ದೇನೆ ಎಂದು ಒಪ್ಪಿಕೊಂಡ ವಿಡಿಯೋ ವೈರಲ್ ಆಗಿದೆ. ಲಾಡ್ಜ್‌ನಲ್ಲಿ ಮಹಿಳೆಯೊಂದಿಗೆ ಇರುವ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ, ಸ್ವಾಮೀಜಿ ತಾನು ಅಂತ ಕೆಲಸ ಮಾಡುವ ಮನುಷ್ಯನೇ ಅಲ್ಲ ಎಂದು ಹೇಳಿದ್ದರು.

ಈಗ ಸ್ವಾಮೀಜಿ, ‘ಹೆಂಗಸರಷ್ಟೇ ಮಾಡುತ್ತೇನೆ. ಬೇರೆ ಯಾವ ಲಫಡಾ ಕೆಲಸ ಮಾಡಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಸ್ವಾಮಿ ಕಾಮ ಪುರಾಣ ವೀಡಿಯೋ ವೈರಲ್ ಆದ ಬಳಿಕ ಗಂಗಾವತಿಯಲ್ಲಿ ವೀರಶೈವ ಲಿಂಗಾಯತರು ಹೋರಾಟ ಆರಂಭಿಸಿದ್ದರು. ಇದೀಗ ಸ್ವಾಮೀಜಿ ತನ್ನ ಡ್ರೈವರ್ ಜತೆಗೆ ಮಾತನಾಡಿರುವ ವೀಡಿಯೋ ವೈರಲ್ ಆಗಿದೆ.

Comments are closed.