ರಾಷ್ಟ್ರೀಯ

ಮುಸ್ಲಿಮ್‌ ಪುರುಷರನ್ನು ಶಿಕ್ಷಿಸಲು ತ್ರಿವಳಿ ತಲಾಖ್‌ ಕಾನೂನು ಅಸ್ತ್ರ: ಅಸಾದುದ್ದೀನ್‌ ಓವೈಸಿ

Pinterest LinkedIn Tumblr


ಔರಂಗಾಬಾದ್‌: ತ್ರಿವಳಿ ತಲಾಖ್‌ ಕಾನೂನು ಮೂಲಕ ಮುಸ್ಲಿಮ್‌ ಪುರುಷರನ್ನು ಶಿಕ್ಷಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾವುದ್ದೀನ್‌ ಓವೈಸಿ ಆರೋಪಿಸಿದ್ದಾರೆ.

ಪದ್ಮಾವತ್‌ ಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಅದನ್ನು ವೀಕ್ಷಿಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಆದರೆ ತ್ರಿವಳಿ ತಲಾಖ್‌ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಓವೈಸಿ ಆರೋಪಿಸಿದರು.

ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಓವೈಸಿ, ತ್ರಿವಳಿ ತಲಾಖ್‌ ಮೂಲಕ ವಿವಾಹ ವಿಚ್ಛೇದನ ಪಡೆಯುವವರನ್ನು ಸಾಮಾಜಿಕವಾಗಿ ಬಹಿಷ್ಕಾರ ಹಾಕಬೇಕು ಎಂದರು.

ಮುಸ್ಲಿಮ್‌ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರಕಾರ ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂಪಾ ಮೀಸಲಿಡಬೇಕು ಎಂದು ಓವೈಸಿ ಆಗ್ರಹಿಸಿದರು.

Comments are closed.