ಮುಂಬೈ

ಮುಂಬೈ ಏರ್ ಪೋರ್ಟ್’ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಅಮೆರಿಕ ಮೂಲದ ಉದ್ಯಮಿ ಬಂಧನ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ…

Pinterest LinkedIn Tumblr

ಮುಂಬೈ: ವಿಮಾನ ತಡವಾಗಿದ್ದಕ್ಕೇ ಅಸಮಾಧಾನಗೊಂಡು ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದ ಅಮೆರಿಕ ಮೂಲದ ಭಾರತೀಯ ಉದ್ಯಮಿಯನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ಅಮೆರಿಕ ಮೂಲದ ಭಾರತೀಯ ಉದ್ಯಮಿ ವಿನೋದ್ ಮೂರ್ಜನಿ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ವಿಮಾನದಲ್ಲಿ ಬಾಂಬ್ ಇದೆ ಎಂದು ಮೂರ್ಜನಿ ಕರೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ ಮೂರ್ಜನಿ ಮುಂಬೈನಿಂದ ದೆಹಲಿಗೆ ತೆರಳಿ ಅಲ್ಲಿಂದ ತಮ್ಮ ಕುಟುಂಬಸ್ಥರೊಂದಿಗೆ ವರ್ಜೀನಿಯಾಗೆ ತೆರಳಬೇಕಿತ್ತು, ಮುಂಬೈನಲ್ಲಿ ವಿಮಾನ ತಡವಾಗಿದ್ದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಮಿಸ್ ಆಗಬಹುದು ಎಂಬ ಕಾರಣಕ್ಕೆ ಮೂರ್ಜನಿ ಮುಂಬೈ ವಿಮಾನ ನಿಲ್ದಾಣದ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬಾಂಬ್ ಇರುವುದಾಗಿ ಸುಳ್ಳು ಹೇಳಿದ್ದಾರೆ.

ಆದರೆ ಈ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿ ಹೆಚ್ಚಿನ ವಿವರ ಕೇಳಿದಾಗ ಅವರು ಕರೆಯನ್ನು ಕಟ್ ಮಾಡಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ ನಿಯಂತ್ರಕಿ ತಮ್ಮ ಹಿರಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು,ಈ ವೇಳೆ ತನಿಖೆ ನಡೆಸಿದ ಅಧಿಕಾರಿಗಳಿಗೆ ಇದು ಸುಳ್ಳು ಬಾಂಬ್ ಕರೆ ಎಂದು ತಿಳಿದುಬಂದಿದೆ. ಬಳಿಕ ಈ ಕರೆಯನ್ನು ಪರಿಶೀಲಿಸಿದಾಗ ಇದು ಅದೇ ನಿಲ್ದಾಣದ ದೂರವಾಣಿ ಕೇಂದ್ರದಿಂದ ಮಾಡಿದ ಕರೆಯಾಗಿದ್ದು. ಇಲ್ಲಿನ ಪ್ರಯಾಣಿಕರೇ ಮಾಡಿದ ಕರೆ ಎಂದು ತಿಳಿದುಬಂದಿದೆ. ಕೂಡಲೇ ಸಿಸಿಟಿವಿ ಪರಿಶೀಲಿಸಿದ ಅಧಿಕಾರಿಗಳು ಕರೆ ಮಾಡಿದ್ದ ಮೂರ್ಜನಿ ಅವರನ್ನು ಬಂಧಿಸಿದ್ದಾರೆ.

ಬಂಧನದ ಬಳಿಕ ಮೂರ್ಜನಿ ಅಮೆರಿಕ ಮೂಲದ ಐಟಿ ಕಂಪನಿಯ ಸಿಇಒ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ತಮ್ಮ ಕುಟುಂಬದೊಂದಿಗೆ ವರ್ಜೀನಿಯಾಗೆ ತೆರಳಲು ಅವರು ಈ ಸುಳ್ಳು ಕರೆ ಮಾಡಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

Comments are closed.