ಮುಂಬೈ

ಶಿವಸೇನೆ ಸೇರಿದ ಗುಜರಾತ್‌ನ ವಿವಾದಿತ ನಾಯಕ ಹಾರ್ದಿಕ್‌ ಪಟೇಲ್‌

Pinterest LinkedIn Tumblr


ಮುಂಬೈ: ಗುಜರಾತ್‌ನ ವಿವಾದಿತ ನಾಯಕ ಹಾರ್ದಿಕ್‌ ಪಟೇಲ್‌ ಶಿವಸೇನೆ ಪಕ್ಷ ಸೇರಿದ್ದಾರೆ.

ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಮುಂಬೈ ನಿವಾಸ ಮಾತೋಶ್ರೀಗೆ ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಧವ್‌, ಮುಂಬರುವ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ ನೇತೃತ್ವ ವಹಿಸಲಿದ್ದಾರೆ ಎಂದು ಘೋಷಣೆ ಮಾಡಿದರು.

‘182 ಬಲದ ಗುಜರಾತ್‌ ವಿಧಾನಸಭೆಯಲ್ಲಿ ಶಿವಸೇನೆಯು ಬಹುತೇಕ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಲಿದೆ. ಹಾರ್ದಿಕ್‌ ಅವರ ಪಕ್ಷ ಸೇರ್ಪಡೆ ಹೆಚ್ಚಿನ ಬಲ ತುಂಬಲಿದೆ’ ಎಂದು ಶಿವಸೇನೆ ಯುವ ಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ ಟ್ವೀಟ್‌ ಮಾಡಿದ್ದಾರೆ.

ಮುಂಬರುವ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಶಿವಸೇನೆ, 25 ವರ್ಷಗಳ ಬಿಜೆಪಿಯೊಂದಿಗಿನ ಮೈತ್ರಿಗೆ ತಿಲಾಂಜಲಿ ಇಟ್ಟಿದೆ.

2015ರಲ್ಲಿ ಪಟೇಲ್‌ ಮೀಸಲಾತಿಗಾಗಿ ಹಾರ್ದಿಕ್‌ ಪಟೇಲ್‌ ಗುಜರಾತಿನಲ್ಲಿ ನಡೆಸಿದ್ದ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅದನ್ನೇ ಮುಂಬರುವ ಗುಜರಾತ್‌ ಚುನಾವಣೆಯಲ್ಲಿ ದಾಳವಾಗಿ ಬಳಸಿಕೊಳ್ಳಲು ಶಿವಸೇನೆ ತಯಾರಿ ನಡೆಸಿದೆ.

Comments are closed.