ರಾಷ್ಟ್ರೀಯ

ಉಲ್ಟಾವಾದ ಉತ್ತರ ಪ್ರದೇಶ ಚುನಾವಣಾ ಲೆಕ್ಕಚಾರ

Pinterest LinkedIn Tumblr


ಲಕ್ನೋ, ಫೆ. ೭- ಆಡಳಿತಾರೂಢ ಸಮಾಜವಾದಿ ಪಕ್ಷದ ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಗೆಲುವಿನ ಲೆಕ್ಕಾಚಾರದಲ್ಲಿ ತೊ‌ಡಗಿದ್ದ ಬಿಜೆಪಿ ಮತ್ತು ಬಿಎಸ್‌ಪಿ ಪಕ್ಷಗಳು, ಅಖಿಲೇಶ್ – ರಾಹುಲ್ ಗಾಂಧಿ ಯುವ ಜೋಡಿ ಒಂದಾಗುತ್ತಿದ್ದಂತೆ, ಈಗ ತಮ್ಮ ಗೆಲುವಿನ ಲೆಕ್ಕಾಚಾರವನ್ನು ಬದಲಿಸಿಕೊಳ್ಳುತ್ತಿವೆ.

ಮುಲಾಯಂ ಕುಟುಂಬದ ಒಳಜಗಳ ಚುನಾವಣೆಯಲ್ಲಿ ತಮಗೆ ಲಾಭ ತರಲಿದೆ ಎಂದು ಬಿಎಸ್‌ಪಿ, ಬಿಜೆಪಿ ಲೆಕ್ಕ ಹಾಕಿದ್ದವು. ಆದರೆ ಈಗ ಕೌಟುಂಬಿಕ ಜಗಳ ಶಮನವಾಗಿದೆ. ಅಷ್ಟೆ ಅಲ್ಲ ಎಸ್.ಪಿ., ಕಾಂಗ್ರೆಸ್ ಮೈತ್ರಿ ಸ್ಥಾಪನೆಯಿಂದ ಆ ಪಕ್ಷಗಳ ಮತ ವಿಭಜನೆಯಾಗದಿರುವುದು ಬಿಎಸ್‌ಪಿ, ಬಿಜೆಪಿಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ ಈ ಎರಡೂ ಪಕ್ಷಗಳು ಗೆಲುವಿನ ಹೊಸ ರಣತಂತ್ರಗಳಲ್ಲಿ ತೊಡಗಿವೆ.

ಮಾವೋ ಮತ ಬ್ಯಾಂಕ್

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತಬ್ಯಾಂಕ್ ನಿರ್ಣಾಯಕ ಪಾತ್ರ ವಹಿಸಬಲ್ಲದು. ಈ ಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಳ್ಳಲು ಬಿಎಸ್‌ಪಿ ನಾಯಕಿ ಮಾಯಾವತಿ ಹೆಚ್ಚು ಮಂದಿ ಮಾವೋ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರು.

ಉತ್ತರ ಪ್ರದೇಶ ಚುನಾವಣೆಗಳ ಮೊದಲ ಎರಡು ಹಂತಗಳ ಚುನಾವಣೆ ನಡೆಯುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. 140 ವಿಧಾನಸಭಾ ಕ್ಷೇತ್ರಗಳು ಈ ಭಾಗಕ್ಕೆ ಬರುತ್ತವೆ. ಒಟ್ಟು 26 ಜಿಲ್ಲೆಗಳಿಂದ ಕೂಡಿರುವ ಈ ಭಾಗದಲ್ಲಿ ಮುಸ್ಲಿಂ ಮತಗಳೇ ನಿರ್ಣಾಯಕ. ಹೀಗಾಗಿಯೇ ಬಿಎಸ್‌ಪಿ ಈ ಭಾಗದಲ್ಲಿ 50 ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಸಮಾಜವಾದಿ ಪಕ್ಷವೂ ಮುಸ್ಲಿಂ ಮತಗಳನ್ನೇ ಗುರಿಯಾಗಿಸಿಕೊಂಡು 42 ಮಂದಿ ಮಾವೋ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ತನಗೆ ಪ್ರಮುಖ ವಿರೋಧಿಯಾಗಿರುವ ಸಮಾಜವಾದಿ ಪಕ್ಷವನ್ನು ಮುಸ್ಲಿಂ ವಿರೋಧಿ ಪಕ್ಷ ಎಂದು ಬಿಂಬಿಸಲು, ಬಿ.ಎಸ್.ಪಿ. ನಾಯಕಿ ಮಾಯಾವತಿ ಎಲ್ಲ ಯತ್ನದಲ್ಲೂ ತೊಡಗಿದ್ದಾರೆ. ಮುಸ್ಲಿಂ ಮುಖಂಡ ಹಾಗೂ ಅಪರಾಧ ಹಿನ್ನೆಲೆಯುಳ್ಳ ಅಫ್ಜಲ್ ಅನ್ಸಾರಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.

ಹಿಂದುಮತ

ಯಾವ ಕಾರಣಕ್ಕೂ ಮುಸ್ಲಿಂ ಮತಗಳು ತಮಗೆ ಬರುವುದಿಲ್ಲ ಎಂದು ಖಚಿತಪಡಿಸಿಕೊಂಡಿರುವ ಬಿಜೆಪಿ ಹಿಂದು ಮತಗಳ ಧೃವೀಕರಣದಲ್ಲಿ ತೊಡಗಿವೆ. `ಮುಸ್ಲಿಂ ಮತಗಳು ಬರುವುದಿಲ್ಲ, ಹಿಂದು ಮತಗಳು ವಿಭಜನೆಯಾಗಬಾರದು’ ಎಂಬುದು ಬಿಜೆಪಿಯ ಈಗಿನ ರಣನೀತಿ.

ಹೀಗಾಗಿಯೇ ಚುನಾವಣಾ ಪ್ರಚಾರಕ್ಕೆ ಕಟ್ಟರ್ ಹಿಂದು ಪ್ರತಿಪಾದಕರನ್ನು ಆಯ್ಕೆ ಮಾಡಿದೆ. ಬಿಜೆಪಿ ಪ್ರಚಾರ ಪಟ್ಟಿಯಲ್ಲಿರುವುದರಲ್ಲಿ ಹುಕುಂ ಸಿಂಗ್, ಸಂಗೀತ್ ಸೋಮ್, ಸುರೇಶ್ ರಾಣಾ, ಸಂಜೀವ್ ಬಾಲ್ಸ, ಯೋಗಿ ಆದಿತ್ಯನಾತ್ ಮತ್ತು ರಾಮಚಂದ್ರ ಕಠಾರಿಯಾ ಅವರಂತಹ ನಾಯಕರಿದ್ದಾರೆ.

ಜಾತಿ ಸಮೀಕರಣಗಳ ಲೆಕ್ಕಾಚಾರವೇ ಪ್ರಧಾನವಾಗಿರುವ ಉತ್ತರ ಪ್ರದೇಶದ ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಧೃವೀಕರಣ ಧಾರ್ಮಿಕ ಧೃವೀಕರಣವೂ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Comments are closed.