ರಾಷ್ಟ್ರೀಯ

ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾದ ಹಾರ್ದಿಕ್ ಪಟೇಲ್ ! ಬಿಜೆಪಿ ವಿರುದ್ಧ ಹೋರಾಟ

Pinterest LinkedIn Tumblr

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಟೇಲ್ ಸಮುದಾಯದ ಕೋಟಾಗಾಗಿ ಭಾರಿ ಪ್ರತಿಭಟನೆ ನಡೆಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಹಾರ್ದಿಕ್ ಪಟೇಲ್ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮಂಗಳವಾರ ಮುಂಬೈನಲ್ಲಿ ನಡೆದ ಶಿವಸೇನೆ ಪಕ್ಷದ ಕಾರ್ಯಕ್ರಮದಲ್ಲಿ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿ ಹಾರ್ದಿಕ್ ಪಟೇಲ್ ಶಿವಸೇನೆ ಸೇರ್ಪಡೆಯಾಗಿದ್ದಾರೆ. ಅಂತೆಯೇ ಗುಜರಾತ್ ಚುನಾವಣೆಯಲ್ಲಿ ತಾವು ಉದ್ಧವ್ ಠಾಕ್ರೆ ಮತ್ತು ಶಿವಸೇನೆ ಪರ ಪ್ರಚಾರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಹಾರ್ಧಿಕ್ ಪಟೇಲ್ ತಾವು, ಶಿವಸೇನೆ ಮುಖ್ಯಸ್ಥರಾಗಿದ್ದ ಭಾಳಾ ಠಾಕ್ರೆ ಅವರ ದೊಡ್ಡ ಅಭಿಮಾನಿ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಾವು ಶಿವಸೇನೆ ಜೊತೆ ಪ್ರಚಾರ ನಡೆಸುತ್ತೇವೆ. ಅಂತೆಯೇ ಪಟೇಲ್ ಸಮುದಾಯದ ಮೀಸಲಾತಿ ಸಂಬಂಧ ತಾವು ನಡೆಸುತ್ತಿರುವ ಹೋರಾಟ ಕೂಡ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ ಪಟೇಲ್ ಸಮುದಾಯಕ್ಕೆ ಸರ್ಕಾರಿ ಕೆಲಸ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ವ್ಯಾಪಕ ಪ್ರತಿಭಟನೆ ನಡೆಸಿತ್ತು. ಇದೇ ಕಾರಣಕ್ಕಾಗಿ ಗುಜರಾತ್ ನಲ್ಲಿರುವ ಆಡಳಿತಾ ರೂಢ ಬಿಜೆಪಿ ವ್ಯಾಪಕ ಮುಜುಗರಕ್ಕೀಡಾಗಿತ್ತು. ಇದೀಗ ತನ್ನದೇ ಮೈತ್ರಿ ಪಕ್ಷ ಶಿವಸೇನೆಯೊಂದಿಗೆ ಹಾರ್ದಿಕ್ ಪಟೇಲ್ ಕೈ ಜೋಡಿಸಿತ್ತು ಬಿಜೆಪಿಯನ್ನು ಮತ್ತಷ್ಟು ಮುಜುಗರಕ್ಕೀಡು ಮಾಡಿದೆ.

ಇನ್ನು ಈ ಹಿಂದೆಯೇ ಗುಜರಾತ್ ಚುನಾವಣೆಯಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನೆ ಘೋಷಣೆ ಮಾಡಿದೆ.

Comments are closed.