ರಾಷ್ಟ್ರೀಯ

ಶಶಿಕಲಾ ಮುಖ್ಯಮಂತ್ರಿಯಾಗುವುದಕ್ಕೆ ಜಯಲಲಿತಾ ಸೊಸೆ ದೀಪಾ ವಿರೋಧ

Pinterest LinkedIn Tumblr

ಚೆನ್ನೈ: ಶಶಿಕಲಾ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗುವುದನ್ನು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೋದರ ಸೊಸೆ ದೀಪಾ ಜಯಕುಮಾರ್‌ ವಿರೋಧಿಸಿದ್ದಾರೆ.

ಜಯಲಲಿತಾ ಅವರ ಸಾವು ಅಸಹಜವಾದುದು ಎಂದು ಎಐಎಡಿಎಂಕೆ ಪಕ್ಷದ ಇಬ್ಬರು ನಾಯಕರು ಆರೋಪಿಸಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ದೀಪಾ ಪತ್ರಿಕಾಗೋಷ್ಟಿ ನಡೆಸಿದರು.

ಚುನಾಯಿತ ನಾಯಕರಷ್ಟೇ ಮುಖ್ಯಮಂತ್ರಿಯಾಗಬೇಕು. ಶಶಿಕಲಾ ಜನರಿಂದ ಚುನಾಯಿತರಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಇದು ತಮಿಳುನಾಡಿಗೆ ಕೆಟ್ಟ ದಿನ ಎಂದರು.

ಅತ್ತೆ(ಜಯಲಲಿತಾ) ಆಸ್ಪತ್ರೆಗೆ ದಾಖಲಾದ ಮೊದಲ ದಿನದಿಂದಲೂ ನನಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ನನ್ನ ಅತ್ತೆಗೋಸ್ಕರ ನಾನು ಇಲ್ಲಿದ್ದೇನೆ. ಅಪೂರ್ಣಗೊಂಡಿರುವ ಅವರ ಕೆಲಸವನ್ನು ಪೂರ್ಣಗೊಳಿಸಬೇಕಿದೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಇದೇ ಸಂದರ್ಭದಲ್ಲಿ ತಿಳಿಸಿದರು.

Comments are closed.