ಅಂತರಾಷ್ಟ್ರೀಯ

22 ವರ್ಷದಿಂದ ಚರಂಡಿಯೇ ಇವರ ಮನೆ!

Pinterest LinkedIn Tumblr


ಕೊಲಂಬಿಯಾ: ಇಲ್ಲಿನ ದಂಪತಿ 22 ವರ್ಷಗಳಿಂದ ಚರಂಡಿಯೊಳಗೆ ತಮ್ಮ ನೆಲೆ ಕಂಡುಕೊಂಡಿದ್ದಾರೆ.

ಮಿಗುಲ್‌ ರೆಸ್ಟ್ರಿಪೊ ಮತ್ತು ಮರಿಯಾ ಗಾರ್ಸಿಯ ಎಂಬ ದಂಪತಿ ಹರೆಯದಲ್ಲಿದ್ದಾಗ ಮಾದಕ ದ್ರವ್ಯ ವ್ಯಸನಿಗಳಾಗಿದ್ದರು. ಕೊಲಂಬಿಯಾದ ಬೀದಿಗಳಲ್ಲಿ ಅಂದಿನ ಕಾಲದಲ್ಲಿ ಮಾದಕ ವಸ್ತುಗಳನ್ನು ತರಕಾರಿಯಂತೆ ಮಾರಾಟ ಮಾಡುತ್ತಿದ್ದರಂತೆ.

ಇಬ್ಬರೂ ವ್ಯಸನ ಪ್ರವೃತ್ತಿಯಿಂದಾಗಿ ಮನೆಯವರಿಂದ ತಿರಸ್ಕರಿಸಲ್ಪಟ್ಟಿದ್ದಾರೆ. ಇದರಿಂದ ನಿರ್ಧಾರ ಬದಲಿಸಿ, ಮಾದಕ ವ್ಯಸನಕ್ಕೆ ತಿಲಾಂಜಲಿ ಇಟ್ಟು ಮದುವೆಯಾದರು. ನಂತರ ತಾವು ಇರಲು ಆಯ್ದುಕೊಂಡಿದ್ದು ಪಾಳು ಬಿದ್ದ ಚರಂಡಿ.

ಸಾರ್ವಜನಿಕವಾಗಿ ಬಳಕೆಯಿಲ್ಲದ ಚರಂಡಿಯನ್ನೆ ಮನೆಯಾಗಿಸಿಕೊಂಡು ಅದರ ಒಳಾಂಗಣಕ್ಕೆ ಬಣ್ಣ ಬಳಿದು ದಿನಬಳಕೆ ವಸ್ತುಗಳನ್ನು ಅಲ್ಲಿರಿಸಿಕೊಂಡಿದ್ದಾರೆ. 22 ವರ್ಷದಿಂದ ಬದುಕು ಸಾಗಿಸುತ್ತಿರುವ ದಂಪತಿ ಇಂದಿಗೂ ಚರಂಡಿಯಲ್ಲೇ ವಾಸವಾಗಿದ್ದಾರೆ.

Comments are closed.