ಮುಂಬೈ

ಜಿಯೋ ಗ್ರಾಹಕರಿಗೊಂದು ಸಿಹಿ ಸುದ್ದಿ!

Pinterest LinkedIn Tumblr


ಮುಂಬೈ: 6 ತಿಂಗಳ ಕಾಲ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್ ಸೇವೆ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಠಿಸಿರುವ ರಿಲಯನ್ಸ್ ಜಿಯೋ ಇದೀಗ ಮಾರ್ಚ್ 31ರ ನಂತರವೂ ಅತ್ಯಂತ ಕಡಿಮೆ ಬೆಲೆ ಡೇಟಾ ಸೇವೆ ಹಾಗೂ ಉಚಿತ ವಾಯ್ಸ್ ಕಾಲ್ ಸೇವೆಯನ್ನು ಮುಂದುವರೆಸುವ ಸಾಧ್ಯತೆ ಇದೆ.
ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಂಪನಿ ಉಚಿತ ವಾಯ್ಸ್ ಕಾಲ್ ಸೇವೆಯನ್ನು ಜೂನ್ 30ರವರೆಗೂ ಮುಂದುವರೆಸಲು ನಿರ್ಧರಿಸಿದ್ದು, ಈ ಸಂಬಂಧ ಹೊಸ ಟ್ಯಾರಿಫ್ ಸಿದ್ಧಪಡಿಸುತ್ತಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಮಾರ್ಚ್ 31ರ ನಂತರ ಡೇಟಾಗೆ 100 ರುಪಾಯಿ ಹಾಗೂ ಉಚಿತ ವಾಯ್ಸ್ ಕಾಲ್ ಸೇವೆ ನೀಡಲು ಕಂಪನಿ ನಿರ್ಧರಿಸಿದ್ದು, ಈ ಮೂಲಕ ವರಮಾನ ಸಂಗ್ರಹಿಸಲು ಆರಂಭಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನಾಲ್ಕು ತಿಂಗಳಲ್ಲಿ ಜಿಯೋದ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್ ಸೇವೆ ಸುಮಾರು 72 .4 ಮಿಲಿಯನ್ ಗ್ರಾಹಕರನ್ನು ಸೆಳೆಯವಲ್ಲಿ ಯಶಸ್ವಿಯಾಗಿದ್ದು, ದಿನಂ ಪ್ರತಿ ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ ಎಂದು ಜಿಯೋ ಕಾರ್ಯತಂತ್ರ ಮತ್ತು ಯೋಜನೆ ಮುಖ್ಯಸ್ಥ ಅನ್ಶುಮಾನ್ ಠಾಕೂರ್ ಅವರು ಇತ್ತೀಚಿಗೆ ತಿಳಿಸಿದ್ದರು.

Comments are closed.