ರಾಷ್ಟ್ರೀಯ

ಸ್ನೇಹಿತೆಯ ಬಾಲ್ಯವಿವಾಹ ವಿರೋಧಿಸಿದ್ದಕ್ಕೆ ಮುಸ್ಲಿಂ ಬಾಲಕಿಗೆ ಥಳಿತ

Pinterest LinkedIn Tumblr


ಕೊಲ್ಕೊತಾ: ಸ್ನೇಹಿತೆಯ ಬಾಲ್ಯ ವಿವಾಹಕ್ಕೆ ವಿರೋಧ ವ್ಯಕ್ತ ಪಡಿಸಿದ ಮುಸ್ಲಿಂ ಬಾಲಕಿಗೆ ಥಳಿಸಿದ ಪರಿಣಾಮ ಆಕೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ.
ನದಾಪ್ರಬಾ ಗ್ರಾಮದ ನಿಬೇದಿತಾ ಬಾಲಕಿಯರ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ಬ್ಯೂಟಿ ಕೌತಾನ್ ಎಂಬ ಬಾಲಕಿ ತನ್ನ ಸ್ನೇಹಿತೆ ಸುಜಲ್ ಶೇಕ್ ಎಂಬಾಕೆಯ ವಿವಾಹದ ಆರತಕ್ಷತೆಗೆ ತೆರಳಿದ್ದಳು.
ಈ ವೇಳೆ ವಧು ತನ್ನದೇ ವಯಸ್ಸಿನವಳಾಗಿದ್ದು, ಇನ್ನೂ ಅಪ್ರಾಪ್ತ ಬಾಲಕಿ ಎಂದು ತಿಳಿದ ಕೌತಾನ್ ಕೂಡಲೇ ಮದುವೆ ಮನೆಯಲ್ಲಿಯೇ ಪ್ರತಿಭಟನೆ ನಡೆಸಿದಳು ಆರಂಭಿಸಿದಳು. ಅಪ್ರಾಪ್ತ ಬಾಲಕಿಗೆ ಮದುವೆ ಮಾಡುವುದು ಅಪರಾಧ ಎಂದು ಪಟ್ಟು ಹಿಡಿದು ಕುಳಿತಳು.
ಈ ವೇಳೆ ವಧು ವರರ ಸಂಬಂಧಿಯಾಗಿದ್ದ ಗ್ರಾಮದ ಹಿರಿಯ ಆಕೆಯನ್ನು ನಿಂದಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ವಧು ಅಪ್ರಾಪ್ತಳಾಗಿದ್ದ ಕಾರಣ ಆತಂಕಗೊಂಡ ಆಕೆಯ ಪೋಷಕರು ಹಾಗೂ ಸಂಬಂಧಿಕರು ಪೊಲೀಸರು ಸ್ಥಳಕ್ಕೆ ಬಂದರೆ ಎಲ್ಲರನ್ನ ಬಂಧಿಸುತ್ತಾರೆ ಎಂಬ ಭಯದಿಂದಾಗಿ ನನ್ನ ಹಾಗೂ ನನ್ನ ಪೋಷಕರ ಮೇಲೆ ಹಲ್ಲೆ ನಡೆಸಿದರು. ಸ್ಥಳೀಯರ ಮಧ್ಯಪ್ರವೇಶಿಸಿ ನಮ್ಮನ್ನು ರಕ್ಷಿಸಿದರು ಎಂದು ಹಲ್ಲೆಗೊಳಗಾದ ಬ್ಯೂಟಿ ಕೌತಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾಳೆ.
ಇನ್ನೂ ಬ್ಯೂಟಿ ಕೌತಾನ್ ಪೋಷಕರು ಹಲ್ಲೆ ನಡೆಸಿದ ಗ್ರಾಮದ ಮುಖಂಡ ಸೇರಿ ಆರು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಇಂಗ್ಲೀಷ್ ಬಜಾರ್ ಠಾಣೆ ಪೊಲೀಸರು ವಧು ಮತ್ತು ವರರ ವಯಸ್ಸಿನ ಪ್ರಮಾಣ ಪತ್ರವನ್ನು ನೀಡುವಂತೆ ಪೋಷಕರಿಗೆ ತಿಳಿಸಿದ್ದು. ಪ್ರಮಾಣ ಪತ್ರ ದೊರೆತ ನಂತರ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Comments are closed.