ಮುಂಬೈ

ಸರ್ವ ಋತುವಿನಲ್ಲೂ ಸಮರ್ಥವಾಗಿ ಕಾರ್ಯಾಚರಣೆ ನಡೆಸುವ ಖಾಂಡೇರಿ ಜಲಾಂತರ್ಗಾಮಿ ಲೋಕಾರ್ಪಣೆ

Pinterest LinkedIn Tumblr


ಮುಂಬೈ, ಜ. ೧೨- ಸರ್ವ ಋತುವಿನಲ್ಲೂ ಸಮರ್ಥರಾಗಿ ಕಾರ್ಯಾಚರಣೆ ನಡೆಸಬಲ್ಲ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಖಾಂಡೇರಿ ಜಲಾಂತರ್ಗಾಮಿಯನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ.
ಸ್ಕಾರ್ಪಿನ್ ವರ್ಗದ 2ನೇ ಜಲಾಂತರ್ಗಾಮಿ ಖಾಂಡೇರಿಗೆ ಇಂದು ಇಲ್ಲಿಯ ಮಜಗಾನ್ ಡಾಕ್ ಹಡಗು ನಿರ್ಮಾಣ ಕಟ್ಟೆಯಲ್ಲಿ ಕೇಂದ್ರ ರಕ್ಷಣಾ ರಾಜ್ಯ ಸಚಿವ ಸುಭಾಶ್ ಭಾಮ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಲೋಕಾರ್ಪಣಾ ಸಮಾರಂಭದಲ್ಲಿ ಸಚಿವ ಭಾಮ್ರೆ ಅವರ ಪತ್ನಿ ಬಿನಾಭಾಮ್ರೆ ಜಲಾಂತರ್ಗಾಮಿಯ ಲೋಕಾರ್ಪಣೆ ಮಾಡಿದರು. ಈ ಸಮಾರಂಭದಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಂಬಾ ಸೇರಿದಂತೆ, ಹಿರಿಯ ನೌಕಾಪಡೆ ಅಧಿಕಾರಿಗಳು ಭಾಗವಹಿಸಿದ್ದರು.
ಶತೃಧ್ವಂಸಕ
ಫ್ರಾನ್ಸ್‌ನ ಯುದ್ಧ ಹಡಗು ನಿರ್ಮಾಣ ಸಂಸ್ಥೆ ಡಿಸಿಎನ್ಎಸ್ ಸಂಸ್ಥೆ ಸಹಯೋಗದೊಂದಿಗೆ ಸ್ಕಾರ್ಪಿನ್ ವರ್ಗದ 6 ಜಲಾಂತರ್ಗಾಮಿಗಳಲ್ಲಿ ಇದು ಎರಡನೆಯದಾಗಿದೆ. ಮೊದಲನೆಯದು ಕಲವೇರಿ ಜಲಾಂತರ್ಗಾಮಿ ಕಾರ್ಯಾಚರಣೆಗೆ ಇಳಿಸುವ ಮುನ್ನ ನಡೆಸಬೇಕಾಗಿರುವ ಅಭ್ಯಾಸ ಪ್ರಕ್ರಿಯೆಗಳನ್ನು ಮುಗಿಸಿದೆ.
ಕ್ಷಿಪಣಿ ವಿರೋಧಕ ಸಾಮರ್ಥ್ಯ ಹೊಂದಿರುವ ಖಾಂಡೇರಿ, ನೀರಿನ ಒಳಗಿನಿಂದ ಮತ್ತು ಹೊರಗಿನಿಂದ ಶತೃಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಬಲ್ಲದು ದಾಳಿ ನಡೆಸುವ, ಮಾಹಿತಿ ಸಂಗ್ರಹಿಸುವ, ಸ್ಫೋಟಗಳನ್ನು ಹುದುಗಿಸುವ ಮತ್ತು ಸರ್ವೆಕ್ಷಣೆ ನಡೆಸುವ ಬಹುಮುಖ ಸಾಮರ್ಥ್ಯವನ್ನು ಹೊಂದಿದ್ದು, ಭಾರತೀಯ ನೌಕಾಪಡೆಗೆ ಸಿಂಹಬಲ ನೀಡಬಲ್ಲದು ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಖಾಂಡೇರಿ ಕೋಟೆ
ಮರಾಠರ ಆಳ್ವಿಕೆಯ ಕಾಲದಲ್ಲಿ ಸಮುದ್ರದ ಮಧ್ಯದ ದ್ವೀಪದಲ್ಲಿದ್ದ ಖಾಂಡೇರಿ ಕೋಟೆ ಹೆಸರನ್ನು ಈ ಜಲಾಂತರ್ಗಾಮಿಗೆ ಇಡಲಾಗಿದೆ. 17ನೇ ಶತಮಾನದಲ್ಲಿದ್ದ ಈ ಕೋಟೆ ರಕ್ಷಣೆ ಮತ್ತು ಶತೃ ವಿರುದ್ಧದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಾಗಿಸಿತ್ತು.
ಇದೇ ಆಧಾರದಲ್ಲಿ ಜಲಾಂತರ್ಗಾಮಿಯಲ್ಲಿಯೂ ಹಲವು ವಿಭಾಗಗಳಿದ್ದು ಇವು ಎಲ್ಲಾ ರೀತಿಯ ಕಾರ್ಯಾಚರಣೆಯ ಸಾಧನಗಳನ್ನು ಒಳಗೊಂಡಿದೆ.
ಈ ಜಲಾಂತರ್ಗಾಮಿಯನ್ನು ಡಿಸೆಂಬರ್ ಕೊನೆಯವರೆಗೆ ಹಲವು ಪರೀಕ್ಷೆಗಳಿಗೆ ಒಳಗಾಗಿ ನಂತರ ನೌಕಾಪಡೆ ಸೇನೆಗೆ ನಿಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Comments are closed.