ಕ್ರೀಡೆ

ಕ್ರಿಕೆಟ್ ಆಯ್ಕೆ ಸಮಿತಿಗೆ ಮೂವರು ಸದಸ್ಯರು ಇದ್ದಾರೆ ಸಾಕು ಎಂದ ಲೋಧಾ ಸಮಿತಿ

Pinterest LinkedIn Tumblr


ನವದೆಹಲಿ, ಜ. ೧೨- ಇನ್ನು ಮುಂದೆ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ಟೆಸ್ಟ್ ಪಂದ್ಯಗಳನ್ನು ಆ‌ಡಿದ ಅನುಭವವುಳ್ಳ ಮೂವರು ಸದಸ್ಯರು ಮಾತ್ರ ಇದ್ದರೆ, ಸಾಕು ಎಂದೂ ಬಿಸಿಸಿಐನ ಸಿಇಒ ರಾಹುಲ್ ಜೋಹ್ರಿ ಅವರಿಗೆ ನ್ಯಾಯಮೂರ್ತಿ (ನಿವೃತ್ತ) ಆರ್.ಎಂ. ಲೋಧಾ ನೇತೃತ್ವದ ಸಮಿತಿ ಹೇಳಿವೆ.
ಜೋಹ್ರಿ ಅವರು ಲೋಧಾ ಸಮಿತಿಗೆ ಪತ್ರ ಬರೆದು ಇರಾನಿ ಟ್ರೋಫಿ ಪಂದ್ಯಕ್ಕೆ ಭಾರತದ ಇತರರ ತಂಡವನ್ನು ಆಯ್ಕೆ ಮಾಡಬೇಕಿದ್ದು, ಸಾಮಾನ್ಯವಾಗಿ ರಣಜಿ ಟ್ರೋಫಿಯ ಪಂದ್ಯಾವಳಿಯ ಕೊನೆಯ ದಿನ ಆಯ್ಕೆ ಮಾಡುವ ಪರಿಪಾಠವಿದೆ. ಈಗ ನಾವು ಈ ಪ್ರಕ್ರಿಯೆಗಾಗಿ ಎಲ್ಲಾ ಆಯ್ಕೆ ಸಮಿತಿಯ ಎಲ್ಲಾ ಐವರು ಸದಸ್ಯರನ್ನು ಕರೆಯಬೇಕೊ ಅಥವಾ ಟೆಸ್ಟ್ ಪಂದ್ಯ ಆಡಿ ಅನುಭವವುಳ್ಳ ಮೂವರು ಸದಸ್ಯರು ಮಾತ್ರ ಸಾಕೊ? ದಯಮಾಡಿ ಮಾರ್ಗದರ್ಶನ ಮಾಡಿ ಎಂದು ಕೋರಿದ್ದರು.
ಲೋಧಾ ಸಮಿತಿಯ ಕಾರ್ಯದರ್ಶಿ ಗೋಪಾಲ್ ಶಂಕರ ನಾರಾಯಣ್ ಈ ಬಗ್ಗೆ ಹೇಳಿಕೆ ನೀಡಿ ಇನ್ನು ಮುಂದೆ ಎಲ್ಲಾ ಆಯ್ಕೆಗಳನ್ನು ಮೂವರು ಸದಸ್ಯರ ಸಮಿತಿಯೇ ಮಾಡಲಿ. ಹೀಗಾಗಿ ಟೆಸ್ಟ್ ಕ್ರಿಕೆಟ್ ಅನುಭವವುಳ್ಳ ಮೂವರನ್ನು ಮಾತ್ರ ಸಮಿತಿಯಲ್ಲಿ ಉಳಿಸಿಕೊಳ್ಳಿ ಎಂದಿದ್ದಾರೆ.
ಅಂದ ಮೇಲೆ ಟೆಸ್ಟ್ ಕ್ರಿಕೆಟ್ ಆಡಿಲ್ಲದ ಜತಿನ್ ಪರಾಂಜಪೆ ಮತ್ತು ಗಗನ್ ಖೋಡಾ ಇಬ್ಬರೂ ಇರಾನಿ ಕಪ್ ತಂಡದ ಆಯ್ಕೆ ಸಮಿತಿಯಿಂದ ಹೊರಬರಬೇಕಾಗುತ್ತದೆ.
ಪಂದ್ಯಗಳನ್ನು ನಡೆಸಲು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಘಗಳ ಕೆಲವು ಅನರ್ಹಗೊಂಡಿರುವ ಪದಾಧಿಕಾರಿಗಳು ಅಡ್ಡಗಾಲು ಹಾಕಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಮಾಜಿ ಮುಖ್ಯ ನ್ಯಾಯಾಧೀಶರಾದ ಆರ್.ಎಂ. ಲೋಧಾ ಹಾಗೂ ಮಾಜಿ ನ್ಯಾಯಾಧೀಶರಾದ ಅಶೋಕ್ ಬಾನ್ ಮತ್ತು ಆರ್ ಎ. ರವೀಂದ್ರನ್ ಅವರು ನಿನ್ನೆ ದೆಹಲಿಯಲ್ಲಿ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.

Comments are closed.