ಮುಂಬೈ

ಹುಡುಗಿಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು, ಪೊಲೀಸರನ್ನು ಕಾಯಬಾರದು: ಅಬು ಅಜ್ಮಿ

Pinterest LinkedIn Tumblr

abu-azmi-final
ಮುಂಬೈ: ಹೊಸವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿ ಈಗಾಗಲೇ ಕೆಂಗಣ್ಣಿಗೆ ಗುರಿಯಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಕ್ಕರೆ ಇದ್ದಾಗ ಇರುವೆ ಮುತ್ತಿಕೊಳ್ಳುವುದು ಸಾಮಾನ್ಯ. ಫ್ಯಾಷನ್ ಹೆಸರಿನಲ್ಲಿ ಅರೆಬೆತ್ತಲಾದರೆ ಹೀಗೆ ಆಗುತ್ತದೆ. ಮೊದಲು ಪಾಶ್ಚಿಮಾತ್ಯ ಸಂಸ್ಕøತಿಯನ್ನು ಬಿಟ್ಟು ಭಾರತೀಯ ಸಂಸ್ಕೃತಿ ಅಳವಡಿಸಿಕೊಳ್ಳಬೇಕು. ಲೈಂಗಿಕ ದೌರ್ಜನ್ಯ ನಡೆಯಲು ಹುಡುಗಿಯರ ತುಂಡುಡುಗೆಯೇ ಕಾರಣ ಎಂದು ಅಬು ಅಜ್ಮಿ ಮಂಗಳವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಮರ್ಥನೆ ಎನ್ನುವಂತೆ ಇಂದು ಹುಡುಗಿಯರೇ.. ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯಗಳು ನಡೆಯದಂತೆ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಪೊಲೀಸರು ಬರುವವರೆಗೆ ಕಾಯಬೇಡಿ ಅಂತಾ ಹೇಳಿದ್ದಾರೆ.

ಯಾಕಂದ್ರೆ ನಮ್ಮಲ್ಲಿರುವ ಹಣ ಒಂದಿನ ನಾವಿಟ್ಟ ಜಾಗದಿಂದ ನಾಪತ್ತೆಯಾದ್ರೆ, ಮತ್ತೆ ಅದೇ ಜಾಗದಲ್ಲಿ ಹಣವಿಡಲ್ಲ. ಮಾತ್ರವಲ್ಲದೇ ಆ ಬಗ್ಗೆ ಪೊಲೀಸರಿಗೆ ಜವಾಬ್ದಾರಿ ಕೊಡಲ್ಲ. ಅಂತೆಯೇ ಹೆಣ್ಣು ಮಕ್ಕಳು ಕೂಡ ತಮ್ಮ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ದೌರ್ಜನ್ಯ ಎಸಗುವ ಜನರಿಗೆ ಅವಕಾಶಗಳನ್ನು ನೀಡಬಾರದು. ನಾನು ಮಹಿಳೆಯರಿಗೆ ಅವಮಾನ ಮಾಡುತ್ತಿಲ್ಲ. ಬದಲಾಗಿ ನನ್ನ ಈ ಹೇಳಿಕೆಯ ಮೂಲಕ ಮಹಿಳೆಯರನ್ನು ಗೌರವಿಸುತ್ತೇನೆ ಅಂತಾ ಹೇಳಿದ್ರು.

ಪ್ರತೀ ಹೆಣ್ಣು ಮಗಳನ್ನೂ ನನ್ನ ಮಗಳು ಹಾಗೂ ತಾಯಿಯಂತೆ ಕಾಣುತ್ತೇನೆ. ಆದ್ರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಾಯಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ನನ್ನ ಮಗಳಿಗಾಗಿ ನನ್ನ ಜೀವವನ್ನೇ ತ್ಯಾಗ ಮಾಡ್ತೇನೆ. ಮಾತ್ರವಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

Comments are closed.