ಕರ್ನಾಟಕ

ಕಮ್ಮನಹಳ್ಳಿಯಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ಯುವತಿ ಹೇಳಿದ್ದೇನು?

Pinterest LinkedIn Tumblr

kammanahalli
ಬೆಂಗಳೂರು: ಹೊಸ ವರ್ಷದಂದು ಇಡೀ ದೇಶವೇ ಬ್ರಿಗೇಡ್ ಹಾಗೂ ಎಂಜಿ ರಸ್ತೆಯಲ್ಲಿ ನಡೆದ ಈ ಘಟನೆಯನ್ನ ಕೈ ತೋರಿಸಿ, ಶೇಮ್ ಶೇಮ್ ಅನ್ನುತ್ತಿರೋವಾಗ್ಲೇ, ಮತ್ತೊಮ್ಮೆ ತಲೆತಗ್ಗಿಸಿ ನಿಲ್ಲಬೇಕಾದ ಪರಿಸ್ಥಿತಿಯನ್ನ ತಂದಿಟ್ಟಿದ್ದಾರೆ ಬೀದಿ ಕಾಮಣ್ಣರು. ನ್ಯೂ ಇಯರ್ ಪಾರ್ಟಿ ಮುಗಿಸಿ ರಾತ್ರಿ 2 ಗಂಟೆ 40 ನಿಮಿಷಕ್ಕೆ ಮನೆಗೆ ತೆರಳುತ್ತಿದ್ದ ಯುವತಿಯ ಮೇಲೆ ಕಮ್ಮನಹಳ್ಳಿಯಲ್ಲಿ ಯುವಕನೊಬ್ಬ ದೌರ್ಜನ್ಯವನ್ನ ಎಸೆದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ನಡೆದ ಬಳಿಕ ದೌರ್ಜನ್ಯಕ್ಕೊಳಗಾದ ಯುವತಿ ಪೊಲೀಸರಿಗೆ ದೂರು ನೀಡಲು ಹೋಗಿಲ್ಲ. ಆ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿದ್ದ ಪ್ರಶಾಂತ್ ಎಂಬವರ ಮನೆಗೆ ಹೋಗಿ ಘಟನೆಯನ್ನ ವಿವರಿಸಿದ್ದಳು. ಆಕೆ ಹೇಳೋ ಪ್ರಕಾರ ಆ ದಿನ ಏನಾಯ್ತು ಅನ್ನೋದ್ರ ಡೀಟೈಲ್ಸ್ ಇಲ್ಲಿದೆ.

ಅವತ್ತು ನಾನು ಆಟೋದಲ್ಲಿ ಬಂದು ನಮ್ಮ ಮನೆ ರಸ್ತೆಯ ತಿರುವಿನಲ್ಲಿ ಇಳಿದೆ. ನನ್ನ ಇನ್ನೊಬ್ಬ ಗೆಳತಿ ಇನ್ನೂ ಆಟೋಗೆ ಹಣ ಕೊಡೋಕೆ ಅಂತ ಅಲ್ಲೇ ಇದ್ದಳು. ನಾನು ಇಳಿದು ನಿಧಾನವಾಗಿ ನಡೆಯುತ್ತಾ ಬರುತ್ತಿದ್ದೆ. ಆಗ ನನ್ನ ಹಿಂದೆಯಿಂದ ಟೂ ವ್ಹೀಲರ್‍ನಲ್ಲಿ ಇಬ್ಬರು ಯುವಕರು ಬಂದ್ರು. ಮುಂದೆ ಹೋಗಿ ಮತ್ತೆ ತಿರುಗಿ ಬಂದು ದಾರಿ ಬದಿಯಲ್ಲಿ ಗಾಡಿಯನ್ನು ನಿಲ್ಲಿಸಿದ್ರು. ಒಬ್ಬ ಇಳಿದು ನನ್ನ ಬಳಿ ನಡೆದುಕೊಂಡು ಬಂದ. ನನ್ನನ್ನು ತಬ್ಬಿಕೊಂಡ. ಕಿರುಕುಳ ಕೊಟ್ಟ. ನಾನು ಜೋರಾಗಿ ಕಿರುಚುತ್ತಾ ಅವನನ್ನು ತಳ್ಳೋಕೆ ಪ್ರಯತ್ನಪಟ್ಟೆ. ನಂತರ ಆತ ನನ್ನನ್ನು ಎಳೆದುಕೊಂಡು ನಿಂತಿದ್ದ ಗಾಡಿಯ ಬಳಿ ಹೋದ.

ಅವನ ಗೆಳೆಯನ ಜೊತೆ ಸೇರಿ ನನ್ನನ್ನು ಟೂ ವ್ಹೀಲರ್‍ನಲ್ಲಿ ಕೂರಿಸೋಕೆ ನೋಡಿದ. ಹಿಂಸೆ ಕೊಟ್ಟ, ನಾನು ಬಿಡಲಿಲ್ಲ. ಸಾಧ್ಯವಾದಷ್ಟು ತಪ್ಪಿಸಿಕೊಳ್ಳೋಕೆ ಪ್ರಯತ್ನಪಟ್ಟೆ. ಅವರಿಬ್ಬರು ನನ್ನ ಬಟ್ಟೆ ಎಳೆದಾಡಿದ್ರು. ಬಳಿಕ ನನ್ನನ್ನು ದಾರಿಯಲ್ಲಿ ನೂಕಿ ಹಾಕಿ ಅಲ್ಲಿಂದ ಅವರು ಹೋದರು. ಅವರ್ಯಾರು ಅಂತ ನನಗೆ ಗೊತ್ತಿಲ್ಲ. ಸ್ವಲ್ಪ ಹೊತ್ತಲ್ಲಿಯೇ ನೋಡಿದಾಗ ನಾನು ನನ್ನ ಪರ್ಸನ್ನು ಕಳೆದುಕೊಂಡಿದ್ದು ಗೊತ್ತಾಯ್ತು. ಕಿರುಕುಳ ಮಾತ್ರವಲ್ಲ. ನನ್ನನ್ನು ದರೋಡೆ ಮಾಡಿದ್ರು ಅನ್ನೋದು ಆವಾಗ ಗೊತ್ತಾಯ್ತು. ಆದ್ರೆ ನಾನು ದೂರು ಕೊಡೋಕೆ ಹೋಗಿಲ್ಲ. ಸರ್ಕಾರವೇ ಇಂತಹ ಘಟನೆ ಈ ಸಂದರ್ಭದಲ್ಲಿ ನಡೆಯುತ್ತೆ ಅಂತ ಹೇಳಿದ್ಮೇಲೆ ನಾನು ದೂರು ಕೊಟ್ಟು ಪ್ರಯೋಜನವೇನು.? ಮತ್ತೆ ಯಾಕೆ ನಾನೇ ದೂರು ಕೊಟ್ಟು ನನ್ನ ಭವಿಷ್ಯಕ್ಕೆ ಧಕ್ಕೆಯನ್ನ ತಂದುಕೊಡಬೇಕು..?

– ದೌರ್ಜನ್ಯಕ್ಕೊಳಗಾದ ಯುವತಿ

Comments are closed.