ಅಂತರಾಷ್ಟ್ರೀಯ

ಬ್ರಿಟನ್: ವರ್ಷದ ಮೊದಲ ಮಗುವಿಗೆ ಜನ್ಮ ನೀಡಿದ ಭಾರತೀಯ ದಂಪತಿ

Pinterest LinkedIn Tumblr

new_baby_massag1
ಲಂಡನ್: ಜನವರಿ 1 ರಂದು ಭಾರತೀಯ ದಂಪತಿಗೆ ಜನಿಸಿದ ಮಗುವೊಂದು ‘ಬ್ರಿಟನ್ 2017 ವರ್ಷದ ಮೊದಲ ಮಗು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶನಿವಾರ ರಾತ್ರಿ 12 ಗಂಟೆ 1 ನಿಮಿಷಕ್ಕೆ ಭಾರತ ಮೂಲದ ಭಾರತಿ ದೇವಿ (35) ಎಂಬುವವರು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ಇದೀಗ ಈ ಮಗು ‘ಬ್ರಿಟನ್ 2017 ವರ್ಷದ ಮೊದಲ ಮಗು’ ಎಂಬ ಖ್ಯಾತಿಗೆ ಪಾತ್ರವಾಗಿದೆ. ಮಗುವಿಗೆ ಎಲಿನಾ ಕುಮಾರಿ ಎಂದು ನಾಮಕರಣ ಮಾಡಲಾಗಿದೆ.
ಆಸ್ಪತ್ರೆಯಲ್ಲಿದ್ದುಕೊಂಡು ಭಾರತಿ ದೇವಿಯವರು ಹೇಳಿಕೆ ನೀಡಿದ್ದು, ನನಗೆ ಎರಡೂವರೆ ವರ್ಷದ ಮಗನಿದ್ದಾನೆ. ನನ್ನ ಪತಿ ಹೆಸಲು ಅಶ್ವಿನ್ ಕುಮಾರ್, ನಾನು ಮತ್ತು ನನ್ನ ಮಗು ಆರೋಗ್ಯವಾಗಿದ್ದೇವೆ. 9 ತಿಂಗಳು ತುಂಬಿ ಐದು ದಿನಗಳಾಗಿತ್ತು. 2016 ಮಗು ಜನಿಸಬೇಕೆಂದುಕೊಂಡಿದ್ದೆವು. ಆದರೆ, ಹೆರಿಗೆ ತಡವಾದ್ದರಿಂದ 2017ಕ್ಕೆ ಮಗು ಜನಿಸಿದೆ ಎಂದು ಹೇಳಿದ್ದಾರೆ.
ಬ್ರಿಟನ್ 2017ರ ವರ್ಷದ ಮೊದಲ ಮಗು ಎಂಬ ಹೆಗ್ಗಳಿಕೆಯನ್ನು ಮಗು ಪಡೆದಿರುವುದಕ್ಕೆ ಸಂತವಾಗುತ್ತಿದೆ. ಮಗಳು ಬೆಳೆದ ನಂತರ ಆವಳಿಗೆ ಈ ವಿಚಾರವನ್ನು ಹೇಳುವುದಕ್ಕೆ ಬಹಳ ಖುಷಿಯಾಗುತ್ತದೆ. ಈ ಬಾರಿಯ ವರ್ಷ ನಮಗೆ ಬಹಳ ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.

Comments are closed.