ಮುಂಬೈ

ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ‘ಆರ್’ಎಸ್’ಎಸ್ ಏಜೆಂಟ್!

Pinterest LinkedIn Tumblr

anna-hazare
ಮುಂಬೈ(ಜ.04): ಸಕ್ಕರೆ ಕೋ-ಆಪರೇಟಿವ್ ಕಾರ್ಖಾನೆಗಳ ₹25,000 ಕೋಟಿ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ‘ಆರ್‌’ಎಸ್‌’ಎಸ್ ಏಜೆಂಟ್’ ಎಂದು ಎನ್‌’ಸಿಪಿ ಟೀಕಿಸಿದೆ.
ಎನ್‌’ಸಿಪಿ ನಾಯಕ ಶರದ್ ಪವಾರ್ ಅವರ ಹೆಸರಿಗೆ ಮಸಿ ಬಳೆಯಲು ಆರ್‌’ಎಸ್‌’ಎಸ್ ನಡೆಸುತ್ತಿರುವ ಪಿತೂರಿಯಲ್ಲಿ ಅಣ್ಣಾ ಹಜಾರೆ ಅವರ ಪಾತ್ರವೂ ಇದೆ ಎಂದು ಎನ್‌’ಸಿಪಿ ವಕ್ತಾರ ನವಾಬ್ ಮಲಿಕ್ ಆರೋಪಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿರುವ ಮಹಾರಾಷ್ಟ್ರದಲ್ಲೇಕೆ ಹಜಾರೆ ಅವರು ಯಾವುದೇ ಪ್ರತಿಭಟನೆಗಳನ್ನು ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಸಕ್ಕರೆ ಕೋ-ಆಪರೇಟಿವ್ ಕಾರ್ಖಾನೆಗಳ ನಿರ್ವಹಣೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಈ ಕುರಿತಂತೆ ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮನವಿ ಮಾಡಿಕೊಂಡಿದ್ದಾರೆ.
ಹಜಾರೆ ಅವರು ಈ ಹಗರಣದ ಬಗ್ಗೆ ಸಿಬಿಐ ತನಿಖೆ ಕೋರಿ 2 ಸಿವಿಲ್ ಪಿಐಎಲ್ ಹಾಗೂ ಕ್ರಿಮಿನಲ್ ಪಿಐಎಲ್ ಅರ್ಜಿ ಸಲ್ಲಿಸಿದ್ದರು.

Comments are closed.