ಮುಂಬೈ

ಗ್ರಾಮೀಣ ಭಾಗಕ್ಕೆ ಶೇ.40ರಷ್ಟು ನೋಟು ಪೂರೈಕೆ ಮಾಡಿ: ಆರ್‌ಬಿಐ

Pinterest LinkedIn Tumblr

note1
ಮುಂಬೈ: 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ 50 ದಿನ ಕಳೆದರೂ ಜನ ಇನ್ನೂ ನಗದು ಬಿಕ್ಕಟ್ಟು ಎದುರಿಸುತ್ತಿದ್ದು, ಗ್ರಾಮೀಣ ಭಾಗದ ರೈತರು ಮತ್ತು ಬಡವರ ಸಂಕಷ್ಟಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆರ್ ಬಿಐ ಗ್ರಾಮೀಣ ಭಾಗಗಳಿಗೆ ಶೇ.40ರಷ್ಟು ಕರೆನ್ಸಿ ನೋಟುಗಳನ್ನು ಪೂರೈಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ನೋಟು ವಿನಿಮಯದ 50 ದಿನಗಳ ಗಡುವು ಮುಗಿದಿರುವ ಹೊರತಾಗಿಯೂ ದೇಶದ ವಿವಿಧೆಡೆಗಳಲ್ಲಿ, ವಿಶೇಷವಾಗಿ ರೈತರು ಮತ್ತು ಬಡವರಿಗೆ, ನಗದು ಕೊರತೆಯು ತೀವ್ರವಾಗಿ ಬಾಧಿಸುತ್ತಿದೆ. ಇದರ ಪರಿಣಾಮವಾಗಿ ಸರಕಾರ, ಜನರು ಬ್ಯಾಂಕುಗಳಿಂದ ವಾರಕ್ಕೆ 24,000 ರು.ಗಳ ಹಿಂಪಡೆಯುವ ಮಿತಿಯನ್ನು ತೆರವು ಗೊಳಿಸಿಲ್ಲ.
ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಪೂರೈಸದಿರುವುದನ್ನು ಗಮನಿಸಿ ಆರ್‌ ಬಿ ಐ, ಬ್ಯಾಂಕುಗಳಿಗೆ ಶೇ.40ರಷ್ಟು ಪ್ರಮಾಣದಲ್ಲಿ ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಪೂರೈಸುವಂತೆ ಆದೇಶ ನೀಡಿದೆ.

Comments are closed.