
ಗಂಡ ಹೆಂಡತಿಯ ಜಗಳ ಉಂಡು ಮಲಗೋವರೆಗೆ ಅಂತಾರೆ. ಆದ್ರೆ ಇಲ್ಲೊಂದು ದಂಪತಿ ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ ಮಾತಾನಾಡಿಕೊಂಡ ಅಚ್ಚರಿಯ ಘಟನೆಯೊಂದು ನಡೆದಿದೆ. ಇವರಿಬ್ಬರೂ ರಾಜಿಯಾಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಕ್ಷಿಣ ಜಪಾನಿನ ನಾರಾ ಎಂಬಲ್ಲಿನ ಓಟೋ ಕಟ್ಯಾಮಾ ಎಂಬವರು ತನ್ನ ಹೆಂಡತಿ ಯುಮಿ ಮಕ್ಕಳ ಕಡೆ ಹೆಚ್ಚಿನ ಗಮನ ಕೊಡುತ್ತಾಳೆ. ನನ್ನನ್ನ ಕ್ಯಾರೇ ಮಾಡುತ್ತಿಲ್ಲ ಅಂತಾ ಹೊಟ್ಟೆಕಿಚ್ಚಿನಿಂದ ಮಾತು ನಿಲ್ಲಿಸಿದ್ರು ಅಂತೆ. ಆದ್ರೆ ವಿಶೇಷವೆಂದ್ರೆ ಇವರಿಬ್ಬರೂ ಇಂದಿನವರೆಗೂ ಒಟ್ಟಾಗಿಯೇ ಜೀವನ ಮಾಡುತ್ತಿದ್ರು.
ಈ ವಿಚಾರ ಇತ್ತೀಚೆಗೆ ದಂಪತಿಯ ಮಗ ಯೋಶಿಕಿ ಟಿವಿಯೊಂದಕ್ಕೆ ತನ್ನ ಅಪ್ಪ-ಅಮ್ಮ ಪರಸ್ಪರ ಮಾತನಾಡಿಕೊಂಡಿದ್ದನ್ನ ನಾನು ಈವರೆಗೆ ನೋಡಿಲ್ಲ. ಹೀಗಾಗಿ ಅವರನ್ನು ಮಾತನಾಡಿಸಬೇಕು. ಇದಕ್ಕಾಗಿ ಒಂದು ಕಾರ್ಯಕ್ರಮ ಮಾಡಬೇಕು ಅಂತಾ ಪತ್ರವನ್ನು ಬರೆದಿದ್ದನು.
ಯುವಕನ ಪತ್ರಕ್ಕೆ ಪ್ರತಿಕ್ರಿಯಿಸಿದ ಟಿವಿ ಚಾನೆಲ್ ಅವರು ದಂಪತಿಯನ್ನ ಮಾತನಾಡಿಸಲು ದಿನ ನಿಗದಿ ಮಾಡ್ತಾರೆ. ಅಂತೆಯೇ ಪಾರ್ಕೊಂದರಲ್ಲಿ ಮಾತನಾಡಿಸುವ ಕಾರ್ಯಕ್ರಮ ನಡೆಯುತ್ತದೆ. ಈ ದೃಶ್ಯವನ್ನು ಸಂಪೂರ್ಣವಾಗಿ ವಿಡಿಯೋ ಮಾಡಲಾಗಿದೆ.
ವೀಡಿಯೋದಲ್ಲಿ ಏನಿದೆ? ಇಬ್ಬರನ್ನು ಪಾರ್ಕಿನಲ್ಲಿ ಕೂರಿಸಿ ಬಳಿಕ ಮಾತನಾಡಿಕೊಳ್ಳುವಂತೆ ಹೇಳಲಾಗಿದೆ. ದಂಪತಿಯ ಮಕ್ಕಳು ಈ ಎಲ್ಲಾ ಘಟನೆಗಳನ್ನು ದೂರದಿಂದ ಕುಳಿತು ನೋಡುತ್ತಿರುತ್ತಾರೆ. ಮಾತ್ರವಲ್ಲದೇ ತಮ್ಮ ಹೆತ್ತವರು ಒಬ್ಬರನೊಬ್ಬರು ಮಾತನಾಡಿಸಿಕೊಳ್ಳುವುದನ್ನು ಕಂಡು ಮಕ್ಕಳು ಖುಷಿಯಿಂದ ಕಣ್ಣೀರು ಹಾಕ್ತಾರೆ.
ಪಾರ್ಕಿನಲ್ಲಿರುವ ಕಲ್ಲಿನಲ್ಲಿ ದಂಪತಿಗಳು ಕುಳಿತಿದ್ದು, ಗಂಡ ತನ್ನ ಹೆಂಡತಿ ಜೊತೆ, ಮಾತು ಬಿಟ್ಟು ನಾನು ತಪ್ಪು ಮಾಡಿದೆ. ನಾನು ಮಾತು ಬಿಟ್ರು ಇಷ್ಟು ದಿನ ನನ್ನ ಸಹಿಸಿಕೊಂಡು ಜೊತೆ ಬಾಳಿದ್ದಿಯಾ. ಹೀಗಾಗಿ ನಿನ್ನಂತಹ ಹೆಂಡ್ತಿ ಪಡೆದಿರುವುದಕ್ಕೆ ನನಗೆ ಹೆಮ್ಮೆ ಆಗ್ತಿದೆ. ನೀನು ನನಗಿಂತ ಹೆಚ್ಚು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ಅಂತಾ ಹೊಟ್ಟೆಕಿಚ್ಚಿನಿಂದ ಮಾತು ಬಿಟ್ಟಿದೆ ಅಂತಾ ಹೇಳಿಕೊಂಡಿದ್ದಾರೆ. ಪತಿ ಮಾತು ಕೇಳಿ ಪತ್ನಿಗೆ ಒಂದು ಕ್ಷಣ ಕಣ್ಣೀರು ಬಂದ್ರು ಮತ್ತೆ ಒಂದಾದ ಖುಷಿ ಅವರನ್ನು ಕಾಡಿತ್ತು.
ಬಳಿಕ ಇನ್ನು ಮುಂದೆ ನಾವು ಚೆನ್ನಾಗಿಯೇ ಇರ್ತೀವಿ. ಮಾತ್ರವಲ್ಲದೇ ಇಂತಹ ಘಟನೆ ಮರುಕಳಿಸಲಾರದು ಅಂತಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
Comments are closed.