
ಶಿವಮೊಗ್ಗ(ಜ.03): ಪತಿಯ ಪಲ್ಲಂಗ ಪುರಾಣ ಕಂಡು ಹಿಡಿಯಲು ಹೆಂಡತಿ ಯಾವೆಲ್ಲ ಮಾರ್ಗಗಳನ್ನು ಹುಡುಕಬಹುದು..? ಕಟ್ಟಿಕೊಂಡ ಪತ್ನಿಯಿದ್ದೂ, ಬೇರೊಬ್ಬಳ ಸಂಗ ಮಾಡುತ್ತಿದ್ದ ಗಂಡನ ಚೆಲ್ಲಾಟವನ್ನು ಪತ್ನಿಯೊಬ್ಬಳು ಬಯಲು ಮಾಡಿ, ಆತನನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಅಂದಹಾಗೆ ಗಂಡನ ಹಗ್ಗ ಕಡಿಯುವ ಚಾಳಿಯನ್ನು, ಈಕೆ ರಹಸ್ಯ ಕಾರ್ಯಾಚರಣೆ ಮೂಲಕ ಸೆರೆ ಹಿಡಿದು ಬಯಲು ಮಾಡಿದ್ದು ಹೇಗೆ? ಇಲ್ಲಿದೆ ವಿವರ
ಹೆಂಡತಿಯಿದ್ದರೂ..ದಾರಿ ತಪ್ಪಿದ ಗಂಡ
ಈಕೆಯ ಹೆಸರು ಶೋಭಾ. ವಯಸ್ಸು 24 ವರ್ಷ. ಮದುವೆಯಾಗಿ 4 ವರ್ಷಗಳಾಗಿತ್ತಷ್ಟೇ. ಆದರೆ, ತಾಳಿ ಕಟ್ಟಿದ್ದ ಗಂಡ ಹಾಲೇಶ ನಾಯ್ಕ, ಮದುವೆಯಾಗಿ 6 ತಿಂಗಳಿಗೇ ದಾರಿ ತಪ್ಪಿದ್ದ. ಹೆಂಡತಿ ಹೊರಗೆ ಹೋದ ತಕ್ಷಣ, ಮನೆಯಲ್ಲಿ ಈತನ ಇನ್ನೊಂದು ಆಟ ಶುರುವಾಗುತ್ತಿತ್ತು.
ಪರಸ್ತ್ರೀ ಜೊತೆ ಪಲ್ಲಂಗ ಏರಿದ ಹಾಲೇಶ
ಪತ್ನಿ ಶೋಭಾಗೆ ತನ್ನ ಗಂಡನ ಮೇಲೆ ಅನುಮಾನ ಬಂದಿತ್ತು. ಮನೆಯವರಿಗೆ ಹೇಳಿದರೆ ಯಾರೂ ಆಕೆಯ ಮಾತನ್ನು ನಂಬಿರಲಿಲ್ಲ. ಹೀಗಾಗಿ ಶೋಭಾ ತಾನೇ ಪತ್ತೇದಾರಿಕೆಗಿಳಿದರು. ಆಗ ಬಯಲಿಗೆ ಬಿದ್ದಿದ್ದು ಹಾಲೇಶ ನಾಯ್ಕನ ಅಸಲಿ ಬಂಡವಾಳ.
ಗಂಡನ ಚೆಲ್ಲಾಟಕ್ಕೆ ‘ರಹಸ್ಯ ಕ್ಯಾಮೆರಾ’ ಇಟ್ಟ ಪತ್ನಿ
ಅವರ ಮನೆಯ ಹಾಲ್ನಲ್ಲಿ ಟಿವಿಯ ಎದುರಿಗೇ ದಿವಾನ್ ಕಾಟ್ ಇದೆ. ಆ ದಿವಾನ್ ಕಾಟ್’ನ ಹಿಂದೆ ರಹಸ್ಯ ಕ್ಯಾಮೆರಾ ಇಟ್ಟರು ಶೋಭಾ. ಇದರಿಂದ ಹಾಲೇಶ ನಾಯ್ಕನ ಕೃಷ್ಣಲೀಲೆ ಬಯಲಿಗೆ ಬಿತ್ತು. ಪ್ರೇಯಸಿಯ ಜೊತೆ ಗಂಡನ ಬೆತ್ತಲೆ ಜಗತ್ತು ಬಯಲಾಗಿತ್ತು.
ಕ್ಯಾಮೆರಾದಲ್ಲಿ ಸಿಕ್ಕಿ ಬಿದ್ದ ‘ಕಳ್ಳ’ ಪತಿರಾಯ
ಅಂದಹಾಗೆ ಈ ವಿಡಿಯೋ ಮಾಡಿದ ಶೋಭಾ, ಅಷ್ಟಕ್ಕೇ ಸುಮ್ಮನಾಗಲಿಲ್ಲ. ಗಂಡನನ್ನು ಪ್ರಶ್ನಿಸಿದಳು. ಅಷ್ಟಕ್ಕೇ ಸಿಟ್ಟಿಗೆದ್ದ ಹಾಲೇಶ ನಾಯ್ಕ ಮಚ್ಚಿನಿಂದ ಹೆಂಡತಿಗೇ ಹೊಡೆದಿದ್ದ. ಅಂದು ತಲೆ, ಕೈಗೆ ಏಟು ತಿಂದಿದ್ದ ಶೋಭಾ, ಪ್ರಾಣಾಪಾಯದಿಂದ ಬಚಾವ್ ಆದರು. ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆಕೆಯ ತಾಯಿಗೆ ಮಗಳ ಬದುಕು ಹೀಗಾಯಿತಲ್ಲ ಎಂಬ ಆಘಾತವನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ.
ಗಂಡ ಹೆಂಡತಿ ಮಧ್ಯೆ ಅವಳು
ಅತ್ತ ಗಂಡ ಹಾಲೇಶ ನಾಯ್ಕ, ಅಂದಿನಿಂದ ತಲೆ ಮರೆಸಿಕೊಂಡಿದ್ದಾನೆ. ಇತ್ತ ಆತನ ಪ್ರೇಯಸಿಯೂ ನಾಪತ್ತೆಯಾಗಿದ್ದಾಳೆ. ಶೋಭಾ ಮನೆಯವರು ಈಗ ಹಾಲೇಶ ನಾಯ್ಕನನ್ನ ಹುಡುಕ್ತಾ ಇದಾರೆ.
ಕಳ್ಳಾಟ ಬಯಲಾದಾಗ ರೌಡಿಯಾದ ಗಂಡ
ಗಂಡನ ಚೆಲ್ಲಾಟವನ್ನೇನೋ ಪತ್ತೇದಾರಿಕೆ ಮಾಡಿ ಹಿಡಿದದ್ದಾಯ್ತು. ಆದರೆ, ರೌಡಿಯಾದ ಗಂಡನಿಗೆ ಶಿಕ್ಷೆ ಬೇಡವೇ..? ಆದರೆ ಇದೀಗ ನಾಪತ್ತೆಯಾದ ಹಾಲೇಶ ನಾಯ್ಕ ಎಲ್ಲಿದ್ದಾನೆ ೆಂಬುವುದು ಯಾರಿಗೂ ತಿಳಿದಿಲ್ಲ ಪೊಲೀಸರಿನ್ನೂ ಆತನನ್ನು ಹುಡುಕುತ್ತಲೇ ಇದ್ದಾರೆ.
ಕರ್ನಾಟಕ
Comments are closed.