ಆಧಾರ್ ಪಾವತಿ ವ್ಯವಸ್ಥೆ ಬಂದ ಬಳಿಕ ಆನ್‍ಲೈನ್‍ನಲ್ಲೇ ನೀವು ಆಧಾರ್ ನಂಬರ್ ಲಾಕ್ ಮಾಡಬಹುದು. ಹೀಗಾಗಿ ಇಲ್ಲಿ ಆಧಾರ್ ನಂಬರ್ ಲಾಕ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಲಾಗಿದೆ.
1. ಆಧಾರ್ ವೆಬ್‍ಸೈಟ್ ಓಪನ್ ಮಾಡಿ: uidai.net.in
2. ನಿಮ್ಮ 12 ಅಂಕೆಗಳಿರುವ ಆಧಾರ್ ಸಂಖ್ಯೆ ನಮೂದಿಸಿ
3. ಚಿತ್ರದಲ್ಲಿ ತೋರಿಸಲಾಗಿರುವ ಸೆಕ್ಯೂರಿಟಿ ಕೋಡ್ ಟೈಪ್ ಮಾಡಿ
4. ನಂತರ ಒನ್ ಟೈಮ್ ಪಾಸ್‍ವರ್ಡ್(ಒಟಿಪಿ) ಬಟನ್ ಒತ್ತಿ
5. ಈ ವೇಳೆ ನಿಮ್ಮ ಆಧಾರ್ ಸಂಖ್ಯೆ ನೊಂದಣಿ ಆಗಿರುವ ಮೊಬೈಲ್ ನಂಬರ್‍ಗೆ ಒಟಿಪಿ ಇರುವ ಮೆಸೇಜ್ ಬರುತ್ತದೆ
6. ನಂತರ ವೆರಿಫೈ ಬಟನ್ ಕ್ಲಿಕ್ ಮಾಡಿ
7. ಈಗ ನೀವು ಎನೇಬಲ್ ಬಯೋಮೆಟ್ರಿಕ್ ಲಾಕ್ ಚೆಕ್ ಮಾಡಬಹುದು
8. ಇಲ್ಲಿ ಎನೆಬಲ್/ಡಿಸೆಬಲ್ ಬಟನ್ ಒತ್ತುವ ಮೂಲಕ ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಆಧಾರ್ ನಂಬರ್ ಲಾಕ್ ಮಾಡಿದ್ರೆ ನಿಮ್ಮ ಐರಿಸ್ ಮತ್ತು ಹೆಬ್ಬೆಟ್ಟು ಮೂಲಕ ಯಾವುದೇ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಒಂದು ವೇಳೆ ನೀವು ಲಾಕ್ ಮಾಡಿದ್ರೆ ನಿಮ್ಮ ಮೊಬೈಲ್‍ಗೆ ಒಟಿಪಿ ಬರುತ್ತದೆ. ಈ ಒಟಿಪಿ ಬಳಸಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸಬೇಕಾಗುತ್ತದೆ.
ಇದನ್ನೂ ಓದಿ: ಭೀಮ್ ಆ್ಯಪ್ ಬಳಸೋದು ಹೇಗೆ?
Comments are closed.