ರಾಷ್ಟ್ರೀಯ

ಪೇಟಿಎಂ ಜೊತೆಗಿನ ವ್ಯವಹಾರವನ್ನು ಮೋದಿ ಬಹಿರಂಗಪಡಿಸಲಿ: ಎಎಪಿ

Pinterest LinkedIn Tumblr

paytm-modi
ನವದೆಹಲಿ: ಮೊಬೈಲ್ ಮೂಲಕ ಹಣಕಾಸು ವ್ಯವಹಾರ ಮಾಡಲು ಅನುವಾಗುವ ಆಪ್ ಪೇಟಿಎಂ ಜೊತೆಗಿನ ಡೀಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಬೇಕು ಎಂದು ಮಂಗಳವಾರ ಆಗ್ರಹಿಸಿರುವ ಆಮ್ ಆದ್ಮಿ ಪಕ್ಷ ಇಲ್ಲಿಯವರೆಗೂ ಸರ್ಕಾರದ ಮೊಬೈಲ್ ವಾಲೆಟ್ ಗಳನ್ನು ಪ್ರಚಾರ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದೆ.
ಭಾರತೀಯ ಜನಪಾ ಪಕ್ಷದ ಚುನಾವಣಾ ರ್ಯಾಲಿಗಳನ್ನು ಪೇಟಿಎಂ ಆಯೋಜಿಸುತ್ತಿರುವುದೇಕೆ ಎಂದು ಕೂಡ ಎಎಪಿ ಪಕ್ಷ ಪ್ರಶ್ನಿಸಿದೆ.
ಮೋದಿ ಮೊದಲು ಪೇಟಿಎಂ ಜಾಹಿರಾತಿನಲ್ಲಿ ಕಾಣಿಸಿಕೊಂಡರು ಮತ್ತು ಇತ್ತೀಚಿಗೆ ಪೇಟಿಎಂ ಪಶ್ಚಿಮ ದೆಹಲಿಯ ಇಂದರ್ ಪುರಿಯಲ್ಲಿ ಬಿಜೆಪಿ ಪಕ್ಷದ ಚುನಾವಣಾ ರ್ಯಾಲಿಯನ್ನು ಆಯೋಜಿಸಿತ್ತು ಎಂದು ಎಎಪಿ ಶಾಸಕ ಸೌರಭ ಭಾರಾಧ್ವಾಜ್ ಹೇಳಿದ್ದಾರೆ.
“ಚೈನಾ ಹೂಡಿಕೆ ಮಾಡಿರುವ ಸಂಸ್ಥೆ ಪೇಟಿಎಂ ಜೊತೆಗೆ ಪ್ರಧಾನಿ ಮೋದಿ ಯಾವ ರೀತಿಯ ಡೀಲ್ ಗೆ ಸಹಿ ಹಾಕಿದ್ದಾರೆ ಎಂದು ಜನ ತಿಳಿಯಲು ಬಯಸುತ್ತಾರೆ. ಪೇಟಿಎಂ ಆಯೋಜಿಸಿದ್ದ ರ್ಯಾಲಿಯಲ್ಲಿ ಬಿಜೆಪಿ ಸದಸ್ಯರು ಭಾಗಿಯಾಗಿದ್ದಲ್ಲದೆ, ಆ ಸಂಸ್ಥೆಯ ಪ್ರಚಾರವನ್ನು ಕೂಡ ಮಾಡಿದರು” ಎಂದು ಭಾರದ್ವಾಜ್ ವರದಿಗಾರರಿಗೆ ಹೇಳಿದ್ದಾರೆ.
“ಪೇಟಿಎಂ ಬಿಜೆಪಿಯ ಚುನಾವಣಾ ಸಭೆಗಳನ್ನು ಆಯೋಜಿಸುತ್ತಿರುವುದೇಕೆ? ಪೇಟಿಎಂ ರೀತಿಯ ಸಂಸ್ಥೆಗಳು ಮೋದಿ ಮೂಲಕ ಬಿಜೆಪಿಯನ್ನು ನಡೆಸುತ್ತಿವೆಯೇ?” ಎಂದು ಎಎಪಿ ರಾಷ್ಟ್ರೀಯ ವಕ್ತಾರ ರೀಚಾ ಪಾಂಡೆ ಹೇಳಿದ್ದಾರೆ.
“ಸರ್ಕಾರದ ಮೊಬೈಲ್ ವಾಲೆಟ್ ಗಳನ್ನು ಇನ್ನು ಪ್ರಚಾರ ಮಾಡಿಲ್ಲವೇಕೆ?” ಎಂದು ಕೂಡ ಪಾಂಡೆ ಪ್ರಶ್ನಿಸಿದ್ದಾರೆ.

Comments are closed.