ರಾಷ್ಟ್ರೀಯ

ಮನೆಯಲ್ಲಿಯೇ ಮಿನಿ ಗಾಂಜಾ ತೋಟ!

Pinterest LinkedIn Tumblr

ganja
ಹೈದ್ರಾಬಾದ್(ಜ.03): ಗಾಂಜಾವನ್ನ ಕಳ್ಳ ಮಾರ್ಗಗಳ ಮೂಲಕ ಸಾಗಾಟ ಮಾಡುವ ವರದಿಗಳನ್ನ ಕೇಳಿದ್ದೇವೆ. ಆದರೆ, ಇಲ್ಲೊಂದು ಪ್ರಕರಣದ್ಲಲಿ ಮನೆಯಲ್ಲಿ ರಾಜಾರೋಶವಾಗಿ ಗಾಂಜಾ ಬೆಳೆದು ಸಿಕ್ಕಿಬಿದ್ದಿರುವ ಘಟನೆ ಹೈದ್ರಾಬಾದ್`ನ ಮಣಿಕೊಂಡದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ 33 ವರ್ಷದ ವ್ಯಕ್ತಿಯನ್ನ ಬಂಧಿಸಲಾಗಿದೆ.
ದಾಳಿ ವೇಳೆ 8 ಕೆ.ಜಿಯಷ್ಟು ಗಾಂಜಾ ಮತ್ತು 40 ಪಾಟ್`ಗಳಲ್ಲಿದ್ದ ಗಾಂಜಾ ಗಿಡಗಳನ್ನ ವಶಪಡಿಸಿಕೊಂಡಿದ್ದಾರೆ. ಅಧಿಕ ಆದಾಯ ಗಳಿಸುವ ಉದ್ದೇಶದಿಂದ ಸಯ್ಯದ್ ಶಾಹಿದ್ ಹುಸೇನ್ ತನ್ನ 3 ಬೆಡ್ ರೂಮ್ ಫ್ಲ್ಯಾಟ್`ನಲ್ಲಿಯೇ ಪೊಲೀಸರು ಮತ್ತು ಜನರ ಕಣ್ಣು ತಪ್ಪಿಸಿ ಪಾಟ್`ಗಳಲ್ಲಿ ಗಾಂಜಾ ಗಿಡಗಳನ್ನ ಬೆಳೆಸಿದ್ದ.
ಸೈಯದ್ ಗಾಂಜಾ ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ಧಾರೆ. ತನ್ನ ಫ್ಲ್ಯಾಟ್`ನಲ್ಲಿ ತಾನೇ ನಿರ್ಮಿಸಿಕೊಂಡಿದ್ದ ಮಿನಿತೋಟದಲ್ಲಿ ಗಾಂಜಾ ಬೆಳೆದಿದ್ದ ಬಗ್ಗೆ ಸೈಯದ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ವೈಜ್ಞಾನಿಕವಾಗಿ ಉಷ್ಣಾಂಶ ಮಿತಿಯಲ್ಲಿಡುವ ವ್ಯವಸ್ಥೆ ಮಾಡಿಕೊಂಡು ಫ್ಲ್ಯಾಂಟ್ ಒಳಗಡೆ ಬೇಳೆದಿದ್ದ ಗಾಂಜಾವನ್ನ ಕಂಡು ಪೊಲೀಸರಿಗೇ ಅಚ್ಚರಿಯಾಗಿದೆ.

Comments are closed.