ಮುಂಬೈ

ನೆರೆಮನೆಯಾಕೆಯೊಂದಿಗೆ ಜಗಳ ಮಾಡಿದ ಮಹಿಳೆ 5 ವರ್ಷದ ಮಗುವನ್ನೇ 15ನೇ ಮಹಡಿಯಿಂದ ಎಸೆದುಬಿಟ್ಟಳು…

Pinterest LinkedIn Tumblr

buildings

ಮುಂಬಯಿ: ಮಹಿಳೆಯೊಬ್ಬಳು ತನ್ನ ನೆರೆಮನೆಯಾಕೆಯ ಜೊತೆ ಜಗಳ ಮಾಡಿಕೊಂಡು 5 ವರ್ಷದ ಹೆಣ್ಣು ಮಗುವನ್ನ 15ನೇ ಮಹಡಿಯಿಂದ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ.

15ನೇ ಮಹಡಿಯಿಂದ ಎಸೆಯಲ್ಪಟ್ಟ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಬೈಸುಲ್ಲಾದಲ್ಲಿರುವ ವಿಗ್ನಹರ್ತಾ ಕಟ್ಟಡದಲ್ಲಿ ಸೋಮವಾರ ಸುಮಾರು 12.30ರ ವೇಳೆಗೆ ಈ ಘಟನೆ ನಡೆದಿದೆ.

ಕಟ್ಟಡದಲ್ಲಿರುವ ನರೆಹೊರೆಯ ಇಬ್ಬರು ಮಹಿಳೆಯರ ಮಧ್ಯೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ಜಗಳ ತಾರಕಕ್ಕೇರಿದ್ದು, ಆರೋಪಿ ಮಹಿಳೆ 5 ವರ್ಷದ ಮಗುವನ್ನ ಬಾಲ್ಕನಿಯಿಂದ ಎಸೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Comments are closed.