ರಾಷ್ಟ್ರೀಯ

ಭಯೋತ್ಪಾದನೆಗೆ ನೀಡುತ್ತಿರುವ ಪ್ರಚೋದನೆಯನ್ನು ನಿಲ್ಲಿಸಿ ಶಾಂತಿ ಬೀಜವನ್ನು ಬಿತ್ತಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ

Pinterest LinkedIn Tumblr

ind-pak

ನ್ಯೂಯಾರ್ಕ್: ಬೀಜ ಬಿತ್ತಿದಂತೆ ಪಲ ಬರಲಿದ್ದು, ಭಯೋತ್ಪಾದನೆಗೆ ನೀಡುತ್ತಿರುವ ಪ್ರಚೋದನೆಯನ್ನು ನಿಲ್ಲಿಸಿ ಶಾಂತಿ ಬೀಜವನ್ನು ಬಿತ್ತಿ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನುದ್ದೇಶಿ ಮಾತನಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಅವರು, ಶತ್ರುರಾಷ್ಟ್ರ ಮೊದಲು ಭಯೋತ್ಪಾದನೆಗೆ ನೀಡುತ್ತಿರುವ ಪ್ರಚೋದನೆಯನ್ನು ನಿಲ್ಲಿಸಬೇಕಿದೆ. ಇಂದು ನೀವು ಯಾವ ಬೀಜವನ್ನು ಬಿತ್ತುತ್ತೀರೋ ಅದೇ ಬೀಜ ಮುಂದೆ ಫಲ ಕೊಡಲಿದೆ. ಹೀಗಾಗಿ ಶಾಂತಿಯುತ ಬೀಜವನ್ನು ಬಿತ್ತಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಲಷ್ಕರ್-ಇ-ತೊಯ್ಬಾ, ಜೈಶ್-ಇ-ಮೊಹಮ್ಮದ್, ತಾಲಿಬಾನ್ ಉಗ್ರ ಸಂಘಟನೆಗಳ ನಾಯಕತ್ವ ಪಾಕಿಸ್ತಾನ ರಾಷ್ಟ್ರದಲ್ಲಿದ್ದು, ಈ ಸಂಘಟನೆಗಳು ಅಲ್ ಖೈಯ್ದಾ ಉಗ್ರ ಸಂಘಟನೆ ಜೊತೆಗೆ ಸಂಯೋಜಿತವಾಗಿವೆ. ಈ ಉಗ್ರ ಸಂಘಟನೆಗಳು ಹೊರಗಿನಿಂದ ಎಲ್ಲಾ ರೀತಿಯ ಬೆಂಬಲಗಳನ್ನು ಪಡೆಯುತ್ತಿದ್ದು, ಈ ಉಗ್ರ ಸಂಘಟನೆಗಳನ್ನು ನಿಯಂತ್ರಿಸುವ ಹಾಗೂ ಮಟ್ಟಹಾಕುವ ಕ್ರಮಗಳನ್ನು ವಿಶ್ವಸಂಸ್ಥೆ ತೆಗೆದುಕೊಳ್ಳುವ ಅಗ್ಯವಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಚೀನಾ ವಿರುದ್ಧ ಪರೋಗ್ಯವಾಗಿ ಕಿಡಿಕಾರಿರುವ ಅವರು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ವಿರುದ್ಧ ನಿಷೇಧ ಹೇರುವಲ್ಲಿ ವಿಶ್ವಸಂಸ್ಥೆಯಲ್ಲಿಯೇ ಭಿನ್ನಮತ ಎದುರಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ನಿಷೇಧ ಕುರಿತಂತೆ ಪ್ರತೀ ಬಾರಿ ಚರ್ಚೆಯಾದಾಗಲೂ ಚೀನಾ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಅಲ್ಲದೆ, ಅಲ್ ಖೈದಾ ಉಗ್ರ ಸಂಘಟನೆ ಮತ್ತು ಅದರೊಂದಿಗೆ ಸಂಯೋಜಿತವಾಗಿರುವ ಉಗ್ರ ಸಂಘಟನೆಗಳ ವಿರುದ್ಧ ನಿಷೇಧ ಹೇರಬೇಕೆಂಬ ಒತ್ತಾಯಕ್ಕೂ ವಿರೋಧ ವ್ಯಕ್ತಪಡಿಸಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿ ಪ್ರಕರಣವನ್ನು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ನಿನ್ನೆಯಷ್ಟೇ ಚಾರ್ಜ್ ಶೀಟ್ ಶೀಟನ್ನು ಸಲ್ಲಿಕೆ ಮಾಡಿತ್ತು. ಚಾರ್ಜ್ ಶೀಟ್ ನಲ್ಲಿ ಮಸೂದ್ ಅಜರ್ ಮಾಸ್ಟರ್ ಮೈಂಡ್ ಆಗಿದ್ದ ಎಂದು ಹೇಳಿಕೊಂಡಿತ್ತು.

Comments are closed.