ವರದಿ : ಈಶ್ವರ ಎಂ. ಐಲ್/ ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಇದು ವಿಶೇಷವಾದಂತಹ ಕಲ್ಪನೆಯ ಕಾರ್ಯಕ್ರಮ. ಕಾರ್ಕಳದ ಅಭಿವೃದ್ದಿ ಕೇವಲ ಶಾಸಕರಿಂದಲ್ಲ. ಬರಿಗೈಯಲ್ಲಿ ಮುಂಬಯಿಗಾಗಮಿಸಿದ ನೀವು ಅಪಾರ ಸಂಪಾದನೆ ಮಾಡುದರೊಂದಿಗೆ ಊರಿನ ಅಭಿವೃದ್ದಿಗೆ ನೆಮ್ಮೆಲ್ಲರ ಕೊಡುಗೆಯಿದೆ. ನಾನಿಲ್ಲಿ ಓಟು ಕೇಳಲು ಯಾ ಹಣ ಸಂಗ್ರಹಿಸಲು ಬಂದಿಲ್ಲ. ನಿಮ್ಮೆಲ್ಲರ ಪ್ರೀತಿಗಾಗಿ ಬಂದಿರುವೆನು. ಕಾರ್ಕಳದ ಜನ ನನ್ನನ್ನು ಅಯ್ಕೆ ಮಾಡಿದ್ದು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಕಾರ್ಕಳದ ಜನಪ್ರಿಯ ವಿ. ಶಾಸಕ ಸುನಿಲ್ ಕುಮಾರ್ ನುಡಿದರು.
ಅಂಧೇರಿ ಪೂರ್ವ ಮಾತೋಶ್ರೀ ಬಳಿಯ ಜೋಗರ್ಸ್ ಪಾರ್ಕನಲ್ಲಿ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರ ಮುಂಬಯಿಯಲ್ಲಿ ನೆಲೆಸಿರುವ ಕಾರ್ಕಳದ ಬಂಧುಗಳೊಡನೆ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರಾರಾಗಿ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಸೇರಿದ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಾರ್ಕಳದ ಸುಮಾರು ಎಂಟು ಸಾವಿರ ಜನರು ಮುಂಬಯಿಯಲ್ಲಿ ಇದ್ದರೆ ಎನ್ನಲು ಆಶ್ಚರ್ಯವಾಗುತ್ತಿದೆ. ಕಾರ್ಕಳಕ್ಕೆ ತನ್ನದೇ ಆದ ಇತಿಹಾಸವಿದೆ. ದೇಶಕ್ಕೆ ಮಾತ್ರವಲ್ಲ ಜಗತ್ತಿಗೆ ಕಾರ್ಕಳದ ಕೊಡುಗೆ ಅಪಾರ. ಕಾರ್ಕಳವು ತಾಲೂಕಾರಿ ಸದ್ಯದಲ್ಲೇ ಶತಮಾನ ಉತ್ಸವವನ್ನು ಆಚರಿಸಲಿದ್ದು ತಾಲೂಕಿನ ಮುಂದಿನ ಅಭಿವೃದ್ದಿಗಾಗಿ ಕೈಗೊಂಡಿರುವ ಯೋಜನೆಯಲ್ಲಿ ಮುಂಬಯಿಯಲ್ಲಿ ನೆಲೆಸಿರುವ ನೀವು ಸಹಕಾರಿಯಾಗಬೇಕು ಎಂದು ಅವರು ವಿನಂತಿಸುತ್ತಾ ತಾಲೂಕಿನ ಅಭಿವೃದ್ದಿಗಾಗಿ ತಮ್ಮ ಯಾವುದೇ ಸಲಹೆ ಸೂಚನೆಗಳನ್ನು ನಮಗೆ ತಿಳಿಸಿದಲ್ಲಿ ಅದರಲ್ಲಿ ಸಾಧ್ಯವಾದಷ್ಟನ್ನು ಕಾರ್ಯರೂಪಕ್ಕೆ ತರಲೆತ್ನಿಸುವೆನು. ನಾಡಿನ ಧಾರ್ಮಿಕ ಕ್ಷೇತ್ರಗಳ ಜೀರ್ಣೊದ್ದಾರಕ್ಕಾಗಿ ಹಾಗೂ ಬ್ರಹ್ಮಕಲಶಕ್ಕಾಗಿ ಮುಂಬಯಿಗರ ಕೊಡುಗೆ ಅಪಾರವಿದ್ದು ನಾವೆಲ್ಲರೂ ಸೇರಿ ಕಾರ್ಕಳ ತಾಲೂಕಿನ ಅಭಿವೃದ್ದಿಯ ಬ್ರಹ್ಮಕಲಶ ಮಾಡೋಣ ಎಂದರು.
ವೇದಿಕೆಯಲ್ಲಿ ಮುಂಬಯಿಯ ಸಂಸದ ಗೋಪಾಲ ಶೆಟ್ಟಿ, ಜಯ ಸುವರ್ಣ, ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಮಣಿರಾಜ್ ಶೆಟ್ಟಿ ಕಾರ್ಕಳ, ಶಿವರಾಮ ಶೆಟ್ಟಿ, ಅಜೆಕಾರು, ಪೋಲೀಸ್ ಅಧಿಕಾರಿ ದಯಾ ನಾಯಕ್, ಅರವಿಂದ ಶೆಟ್ಟಿ, ಪ್ರಕಾಶ್ ಶೆಟ್ಟಿ ಗೋಲ್ಡ್ ಪಿಂಚ್, ಕೃಷ್ಣ ವೈ ಶೆಟ್ಟಿ, ಎರ್ಮಾಳು ಹರೀಶ್ ಶೆಟ್ಟಿ, ಕರಿಯಣ್ಣ ಶೆಟ್ಟಿ, ಆಹಾರ್ ಅಧ್ಯಕ್ಷ ಆದರ್ಶ ಶೆಟ್ಟಿ, ವಿರಾರ್ ಶಂಕರ್ ಶೆಟ್ಟಿ, ನಿತ್ಯಾನಂದ ಕೋಟ್ಯಾನ್, ರಘುವೀರ್ ಶೆಟ್ಟಿ ನಲ್ಲೂರು, ಮಹಾಬಲ ಪೂಜಾರಿ, ಧನಂಜಯ ಅಧಿಕಾರಿ, ಪ್ರಭಾಕರ ಹೆಗಡೆ, ಮನೋಹರ್ ಕಾಮತ್, ಮುನಿರಾಜ್ ಶೆಟ್ಟಿ, ಭಾಸ್ಕರ ಕೋಟ್ಯಾನ್, ಎಲ್. ವಿ. ಅಮೀನ್, ಸದಾನಂದ ಶೆಟ್ಟಿ, ಮುದ್ರಾಡಿ ದಿವಾಕರ ಶೆಟ್ಟಿ, ಶಕುಂತಳಾ ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬಾಲಕೃಷ್ಣ ಶೆಟ್ಟಿ ಉಳೆಪಾಡಿ ಎಲ್ಲರನ್ನೂ ಸ್ವಾಗತಿಸಿದರು. ಮಹೇಶ್ ಶೆಟ್ಟಿ ತೆಲ್ಲಾರು, ಪ್ರಸ್ತಾವನೆಯ ಮಾತುಗಳನ್ನಾಡಿದರು.
ಅರ್ಪಿತಾ ಪ್ರಶಾಂತ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಶಿಕಾಂತ ಶೆಟ್ಟಿ ವಂದನಾರ್ಪಣೆಗೈದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಓಶಿಯನ್ ಕಿಡ್ಸ್ ತಂಡ ಹಾಗೂ ಉಡುಪಿಯ ಬಾರ್ಗವಿ ತಂಡದಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ನಡೆದವು.
ಅತಿಥಿಗಳ ಮಾತು :
ಇಂದಿನ ಜನಸಾಗರವನ್ನು ನೋಡುವಾಗ ಸುನಿಲ್ ಕುಮಾರ್ ಅವರು ನಿಜವಾಗಿಯೂ ಅಭಿನಂದನಾರ್ಹರು. ನಾವು ಶಾರೀರಿಕವಾಗಿ ಇಲ್ಲಿದ್ದರೂ ಮಾನಸಿಕವಾಗಿ ಊರಿನಲ್ಲಿದ್ದೇವೆ ಎಂಬುದು ಇಲ್ಲಿ ಕಂಡುಬರುತ್ತಿದೆ. ಸುನಿಲ್ ಕುಮಾರ್ ಅವರು ಸುಧೀರ್ಘ ಕಾಲ ರಾಜಕೀಯ ಸೇವೆ ಮಾಡಲಿ.
– ಸಂಸದ ಗೋಪಾಲ ಶೆಟ್ಟಿ.
ಇಂದಿಲ್ಲಿ ಸೇರಿರುವ ಜನಸಮುದಾಯವನ್ನು ನೋಡುವಾಗ ಸುನಿಲ್ ಕುಮಾರ್ ಅವರ ಸಾಧನೆ ಬಗ್ಗೆ ಹೇಳಬೇಕಾಗಿಲ್ಲ. ರಾಜಕೀಯದಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದು ಈ ಸಭೆಯು ತೋರಿಸಿಕೊಟ್ಟಿದೆ.
– ಜಯ ಸಿ. ಸುವರ್ಣ
ಕಾರ್ಕಳ ತಾಲೂಕಿನಲ್ಲಿ ಹುಟ್ಟಿರುವೆನೆನ್ನಲು ಹೆಮ್ಮೆಯಾಗುತ್ತಿದೆ. ನಾನು ಕಾರ್ಕಳದಲ್ಲಿ ಹುಟ್ಟಿದ್ದು ನನ್ನ ಸೌಭಾಗ್ಯ.
– ಪೋಲೀಸ್ ಅಧಿಕಾರಿ ದಯಾ ನಾಯಕ್
ಸುನಿಲ್ ಕುಮಾರ್ ಅವರು ಊರಿನಿಂದ ಆಗಮಿಸಿ ಇಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತನ್ನ ವ್ಯಕ್ತಿತ್ವಕ್ಕೆ ಸಮಾನವಾದ ನಾಯಕತ್ವದ ಗುಣ ಅವರಲ್ಲಿದೆ.
– ಐಕಳ ಹರೀಶ್ ಶೆಟ್ಟಿ.
ಕಂಬಳಕ್ಕೆ ತೊಂದರೆಯಾದಾಗ ಕರ್ನಾಟಕ ಸರಕಾರದಲ್ಲಿ ಸ್ವರ ಎತ್ತಿದವರು ಸುನಿಲ್ ಕುಮಾರ್. ಯಾವುದೇ ಕಾರಣದಿಂದ ಕಂಬಳವು ನಿಲ್ಲದಂತಾಗಲಿ.
– ರೋಹಿತ್ ಹೆಗ್ಡೆ ಎರ್ಮಾಳು.
ಈ ಕಾರ್ಯಕ್ರಮ ದಾಖಲೆ ನಿರ್ಮಿಸಿದೆ. ಮುಂದೆ ಇವರನ್ನು ನಾವು ಕರ್ನಾಟಕ ರಾಜ್ಯದ ಮಹಾ ನಾಯಕನನ್ನಾಗಿ ಕಾಣಬಯಸುತ್ತಿದ್ದೇವೆ.
– ಕರ್ನಿರೆ ವಿಶ್ವನಾಥ ಶೆಟ್ಟಿ
ಊರಿನ ಅಭಿವೃದ್ದಿಯಾಗುತ್ತಿದೆ, ಇನ್ನು ನನ್ನಿಂದೇನಾಗಬೇಕು ಎಂದು ಮುಂಬಯಿಗರನ್ನು ಸೇರಿಸಿ ಇಂತಹ ಕಾರ್ಯಕ್ರಮವನ್ನು ನಡೆಸುತ್ತಿರುವ ಸುನಿಲ್ ಕುಮಾರ್ ರಂತಹ ರಾಜಕಾರಣಿಗಳು ನಮ್ಮ ದೇಶದ ಉತ್ತಮ ಭವಿಷ್ಯ.
– ನಿತ್ಯಾನಂದ ಕೋಟ್ಯಾನ್
ಒಳ್ಳೆಯ ಕೆಲಸಕ್ಕೆ ಹೋಟೇಲಿಗರ ಸಹಕಾರ ಯಾವತ್ತೂ ಇದೆ. ಅಭಿವೃದ್ದಿಯ ಕೆಲಸದೊಂದಿಗೆ ತನ್ನ ಕೆಲಸದಲ್ಲೂ ಅಭಿವೃದ್ದಿ ಸಿಗುತ್ತದೆ.
– ಆದರ್ಶ್ ಶೆಟ್ಟಿ (ಆಹಾರ್ ಅಧ್ಯಕ್ಷ)
ಇವರ ಸಾಧನೆ ಇತರರಿಗೆ ಮಾದರಿಯಾಗಲಿ. ಮುಂಬಯಿಯ ಪಸ್ಚಿಮ ಬಾಗದಿಂದ ಮಂಗಳೂರಿಗೆ ರೈಲನ್ನು ಆರಂಭಿಸಲು ಸುನಿಲ್ ಕುಮಾರ ರಂತವರು ಪ್ರಯತ್ನಿಸಲು ವಿನಂತಿಸುತ್ತಿರುವೆನು.
– ವಿರಾರ್ ಶಂಕರ್ ಶೆಟ್ಟಿ
ನಿರೀಕ್ಷೆಗಿಂತಲೂ ಮಿಕ್ಕಿ ಜನರು ಇಂದು ಇಲ್ಲಿ ಸೇರಿದ್ದಾರೆ. ಕಂಬಳವನ್ನು ನಿಲ್ಲಿಸಲು ಬಿಡಬೇಡಿ. ಸುನಿಲ್ ಕುಮಾರ್ ರವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ.
– ಶಿವರಾಮ ಶೆಟ್ಟಿ ಅಜೆಕಾರು
ಕಾರ್ಕಳದ ಅಭಿವೃದ್ದಿ ಸುನಿಲ್ ಕುಮಾರ್ ರವರಿಂದ ಆಗಿದೆ. ಮುಂಬಯಿಗರಿಂದ ನಮ್ಮ ನಾಡಿನ ಧಾರ್ಮಿಕ ಅಭಿವೃದ್ದಿಗೆ ಅಪಾರ ಕೊಡುಗೆಯಿದೆ. ನಾವೆಲ್ಲರೂ ಒಂದಾಗಿ ಸುನಿಲ್ ಕುಮಾರ್ ರನ್ನು ಇನ್ನೂ ಬಲಶಾಲಿಕೊಳಿಸಬೇಕಾಗಿದೆ.
– ಮಣಿರಾಜ ಶೆಟ್ಟಿ, ಕಾರ್ಕಳ
ತುಳುನಾಡಿನ ಕಾರ್ಕಳ ಇಲ್ಲಿ ಒಂದಾಗಿದೆ. ಜನಸಾಗರವನ್ನು ನೋಡುವಾಗ ನನಗೂ ರಾಜಕೀಯಕ್ಕೆ ಸೇರಲು ಆಶೆಯಾಗುತ್ತಿದೆ.
– ಪ್ರಕಾಶ್ ಶೆಟ್ಟಿ, ಗೋಲ್ಡ್ ಪಿಂಚ್