ಕರಾವಳಿ

ಬೈಲೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಗೋಲ್ ಮಾಲ್; ಬ್ಯಾಂಕ್ ಸಿಬ್ಬಂದಿಗಳಿಂದಲೇ ಗ್ರಾಹಕರ ಹಣ ಡ್ರಾ

Pinterest LinkedIn Tumblr

ಉಡುಪಿ: ಬೈಲೂರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಲ್ಲಿ ಭಾರಿ ಗೊಲ್ ಮಾಲ್ ನಡೆದಿದೆ.ಬ್ಯಾಂಕ್ ಸಿಬ್ಬಂದಿಗಳೇ ನಕಲಿ ಸಹಿ ಮಾಡಿ ಲಕ್ಷಾಂತ ರೂಪಾಯಿ ಖಾತೆದಾರರ ಹಣವನ್ನು ಡ್ರಾ ಮಾಡಿದ್ದಾರೆ. ನೋಟ್ ಬ್ಯಾನ್ ಎಫೆಕ್ಟ್ ನಿಂದ ಬ್ಯಾಂಕ್ ಮಂದಿಯ ಗೋಲ್ ಮಾಲ್ ಬೆಳಕಿಗೆ ಬಂದಿದೆ. ಖಾತೆಯಲ್ಲಿ ಹಣ ನಾಪತ್ತೆಯಾದ ಗ್ರಾಹಕರು ಬ್ಯಾಂಕ್ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

udupi_scdcc-bank_fraud4-2 udupi_scdcc-bank_fraud4-3 udupi_scdcc-bank_fraud4-1 udupi_scdcc-bank_fraud4-4

ಉಡುಪಿ ಬೈಲೂರು ಪ್ರತಿಷ್ಠಿತ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಲ್ಲಿ ಭಾರಿ ಗೊಲ್ ಮಾಲ್ ನಡೆದಿದೆ.ಎಸ್ ಸಿ ಡಿ ಸಿ ಸಿ ಬ್ಯಾಂಕ್ ಶಾಖೆಯ ಗುಮಾಸ್ತ ಪ್ರಸಾದ್ ಎನ್ನುವ ವ್ಯಕ್ತಿಯೇ ಈ ಗೋಲ್ ಮಾಲ್ ರೂವಾರಿ.ಖಾತೆದಾರ ನಕಲಿ ಸಹಿ ಬಳಸಿ ಅವರ ಖಾತೆಯಲ್ಲಿದ್ದ ಲಕ್ಷಾಂತ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಕಳೆದ ಜೂನ್ ತಿಂಗಳಿನಿಂದ ಈ ಅವ್ಯವಹಾರದಲ್ಲಿ ಬ್ಯಾಂಕ್ ಸಿಬ್ಬಂದಿ ನಡೆಸುತ್ತಿದ್ದು ಖಾತೆದಾರು ನೋಟು ಸಮಸ್ಯೆ ಸಂಬಂಧಿಸಿದಂತೆ ಇತ್ತಿಚೇಗೆ ನಿತ್ಯ ಬ್ಯಾಂಕ್ ಬ್ಯಾಲೆನ್ಸ್ ಚಕ್ ಮಾಡುವ ವೇಳೆ ಅವ್ಯವಹಾರ ಬೆಳಕಿಗೆ ಬಂದಿದೆ.ಹಾಲು ಮಾರಿ, ಮಲ್ಲಿಗೆ ಹೂ ಮಾರಿ, ಅಡಿಕೆ ಕೃಷಿಕರು ತಮ್ಮ ಬಳಿಯ ಹಣವನ್ನು ಖಾತೆಯಲ್ಲಿ ಜಮಾ ಮಾಡಿದ್ದರು. ಆದ್ರೆ ನೂರಾರು ಗ್ರಾಹಕರು ತಮ್ಮ ಬ್ಯಾಂಕ್ ಬ್ಯಾಲನ್ಸ್ ಚೆಕ್ ಮಾಡುವ ವೇಳೆ ಲಕ್ಷಾಂತರ ಇರುವ ಖಾತೆಯಲ್ಲಿ 500 ಇರುವುದು ನೋಡಿ ಗ್ರಾಹಕರು ಶಾಕ್ ಒಳಗಾಗಿದ್ದಾರೆ. ಒಂದಲ್ಲ ಎರಡಲ್ಲ ನೂರಾರು ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮಂಗಮಾಯ.

ಡೆಪಸಿಟ್ ಎಂಕೌಟ್ ,ಉಳಿತಾಯ ಖಾತೆ ,ಸಾಲದ ಖಾತೆ ಹೀಗೆ ಎಲ್ಲ ಖಾತೆ ದಾರರ ಸಹಿ ಬಳಸಿ ಹಣ ಡ್ರಾ ಮಾಡಲಾಗಿದೆ. ಸದ್ಯ ಬ್ಯಾಂಕ್ ಅಧಿಕಾರಿಗಳು ಪ್ರಸಾದ್ ಎನ್ನುವ ಗುಮಾಸ್ತ ಕೃತ್ಯ ಎಸಗಿದ್ದಾನೆ ಎಂದು ಗೂಬೆ ಕೂರಿಸಿದ್ದಾರೆ. ಕಪ್ಪು ಹಣ ಬಿಳಿ ಮಾಡುವ ವ್ಯವಹಾರಕ್ಕೆ ಗ್ರಾಹಕರ ಖಾತೆಯನ್ನು ಉಪಯೋಗಿಸಿರುವ ಅನುಮಾನ ಕೂಡ ದಟ್ಟವಾಗಿದೆ.ಹಣ ನುಂಗಿ ನೀರುಕುಡಿದ ಆರೋಪಿ ಗುಮಾಸ್ತ ಪ್ರಸಾದ್ ತಲೆ ಮರೆಸಿಕೊಂಡಿದ್ದು , ಬ್ಯಾಂಕ್ ಮುಖ್ಯಸ್ಥರು ಅವ್ಯವಹಾರ ನಡೆದಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ. ಮೂರು ದಿನದೊಳಗೆ ಖಾತೆದಾರರ ಹಣವನ್ನು ವಾಪಸು ಮಾಡುವ ಭರವಸೆ ನೀಡಿದ್ದಾರೆ.

Comments are closed.