ಮುಂಬೈ

ನೋಟು ನಿಷೇಧದ ತೊಂದರೆ ತಪ್ಪಿಸಲು ಅಗತ್ಯ ಕ್ರಮ: ಊರ್ಜಿತ್‌ ಪಟೇಲ್‌

Pinterest LinkedIn Tumblr

Urjitಮುಂಬೈ: ‘ನೋಟು ರದ್ದತಿಯಿಂದ ದೇಶದ ನಾಗರಿಕರಿಗೆ ಉಂಟಾಗಿರುವ ತೊಂದರೆಯನ್ನು ತಗ್ಗಿಸಲು ಕೇಂದ್ರ ಬ್ಯಾಂಕ್‌ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ’ ಎಂದು ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಹೇಳಿದ್ದಾರೆ.

‘ನೋಟು ರದ್ದತಿಯ ನಂತರ ದಿನನಿತ್ಯದ ಬೆಳವಣಿಗೆಗಳನ್ನು ಆರ್‌ಬಿಐ ಗಮನಿಸುತ್ತಿದೆ. ನಾಗರಿಕರಿಗೆ ಉಂಟಾಗಿರುವ ತೊಂದರೆ ತಗ್ಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಟೇಲ್‌ ತಿಳಿಸಿದ್ದಾರೆ.

‘ಹಳೆಯ ₹500 ಮತ್ತು ₹1,000ರ ನೋಟುಗಳ ವಿನಿಮಯದ ಕಾರಣ ಬ್ಯಾಂಕ್‌ಗಳಲ್ಲಿ ಜಮೆ ಹೆಚ್ಚಾಗಿರುವುದರಿಂದ ನಗದು ಮೀಸಲು ಪ್ರಮಾಣವನ್ನು (Cash Reserve Ratio) ಶೇಕಡ 100ರಷ್ಟು ಹೆಚ್ಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಜನ ಡೆಬಿಟ್‌ ಕಾರ್ಡ್‌, ಡಿಜಿಟಲ್‌ ವ್ಯಾಲೆಟ್‌ ಬಳಕೆ ಹೆಚ್ಚು ಮಾಡಬೇಕು. ಇದರಿಂದ ಇತರೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಂತೆ ಭಾರತದಲ್ಲೂ ಕಡಿಮೆ ನಗದು ವಹಿವಾಟು ಸಾಧ್ಯವಾಗಲಿದೆ’ ಎಂದಿದ್ದಾರೆ.

‘ಟಾಯಿಂಟ್‌ ಆಫ್‌ ಸೇಲ್‌ ಮಶೀನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರಿಗೆ ನೀಡಲು ಬ್ಯಾಂಕ್‌ಗಳು ಮುಂದಾಗಬೇಕು. ಇದರಿಂದ ಡೆಬಿಟ್‌ ಕಾರ್ಡ್‌ಗಳ ಬಳಕೆ ಹೆಚ್ಚಲಿದೆ’ ಎಂದು ತಿಳಿಸಿದ್ದಾರೆ.

‘ಬೇಡಿಕೆಗೆ ತಕ್ಕಷ್ಟು ನೋಟುಗಳನ್ನು ಪೂರೈಸಲು ಆರ್‌ಬಿಐ ಮತ್ತು ಸರ್ಕಾರಿ ಒಡೆತನದ ಮುದ್ರಣಾಲಯಗಳಲ್ಲಿ ಸಮರೋಪಾದಿಯಲ್ಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

Comments are closed.