ಕರಾವಳಿ

ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ವಾಪಾಸಾಗುತ್ತಾರಂತೆ..!?

Pinterest LinkedIn Tumblr

ಬೆಂಗಳೂರು: ಕಳೆದ ವಿಧಾನ ಸಭಾ ಚುನಾವಣೆಗೂ ಮೊದಲು ಅಂದರೇ ಅಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಕುಂದಾಪುರದ ಶಾಸಕರಾಗಿದ್ದು ಸಚಿವ ಸ್ಥಾನ ಸಿಗದ ಹಿನ್ನೆಲೆ ಬೇಸರದಿಂದ ಪಕ್ಷ ತೊರೆದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿ ಸೇರ್ಪಪೆಯಾಗುವುದು ನೂರಕ್ಕೆ ನೂರು ಖಚಿತವಾಗಿದೆ. ಕೆಲವಾರು ದಿನಗಳಿಂದ ಹಾಲಾಡಿ ಬಿಜೆಪಿ ಸೇರುವ ಬಗ್ಗೆ ಇದ್ದ ಕುತೂಹಲಕ್ಕೆ ಒಂದಷ್ಟು ತೆರೆಬಿದ್ದಂತಾಗಿದೆ.

haladi-shrinivasa-shetty

ಭಾನುವಾರ ಬೆಂಗಳೂರಿನ ಅರಮನೆ ಅರಮನೆ ಮೈದಾನದಲ್ಲಿ ಬಿಜೆಪಿ ಏಕತಾ ಸಮಾವೇಶದಲ್ಲಿ ಮಾಮೂಲಿಯಾಗಿ ಸಭಿಕರ ಸಭೆಯಲ್ಲಿದ್ದ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರ ಮಾಧ್ಯಮಕ್ಕೆ ಹೇಳಿದ ಒಂದಷ್ಟು ಅಂಶಗಳು ಹೀಗಿದೆ. “ನಾನು ಈ ಹಿಂದೆ ಇದ್ದ ಪಕ್ಷ ಆದ ಕಾರಣ ಒಂದು ವಿಶ್ವಾಸದಲ್ಲಿ ಬಂದಿರುವೆ. ಎಷ್ಟಾದರೂ ಬರಲೇಬೇಕಲ್ಲ……ನಾನು ಬಿಜೆಪಿ ಸೇರುವುದು ಖಚಿತ ಈಗ ತಾಂತ್ರಿಕವಾಗಿ ಸೇರಲು ಅವಕಾಶ ಇಲ್ಲ. ಪಕ್ಷೇತರ ಶಾಸಕನಾಗಿರುವ ನನ್ನ ಶಾಸಕತ್ವದ ಅವಧಿ ಮುಗಿದ ತರುವಾಯ ಬಿಜೆಪಿ ಸೇರುವೆ, ಅಲ್ಲದೇ ಪಕ್ಷ ಟಿಕೇಟ್‌ ನೀಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವೆ ಎಂದರು.

ಈಗಾಗಲೇ ಹಾಲಾಡಿ ಅಭಿಮಾನಿಗಳು ಮತ್ತು ಬೆಂಬಲಿಗರು ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಶ್ರೀನಿವಾಸ ಶೆಟ್ಟಿಯವರು ಕೂಡ ಈ ಹಿಂದೆ ನ್ಡೆದ ಗ್ರಾಮಪಂಚಾಯತ್, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ ತಾನೂ ಎಂದಿಗೂ ಬಿಜೆಪಿ ಪಕ್ಷಕ್ಕೆ ಮರಳಿ ಬರುವೆ ಎಂಬುದನ್ನು ಮಾರ್ಮಿಕವಾಗಿ ತೋರ್ಪಡಿಸಿದ್ದರು. ಹಾಲಾಡಿ ಅವರು ಪಕ್ಷಕ್ಕೆ ವಾಪಾಸಾಗುವುದು ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿನ ಬಿಜೆಪಿ ಅಭ್ಯರ್ಥಿಗಳಿಗೆ ಹೊಸ ಬಲ ನೀಡಲಿದೆ. ಪ್ರಮುಖವಾಗಿ ಹಾಲಾಡಿ ಅವರು ಬೈಂದೂರು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

Comments are closed.