ರಾಷ್ಟ್ರೀಯ

ನಭ ಜೈಲು ದಾಳಿ: ಎಸ್‌ಯುವಿ ಚಲಾಯಿಸುತ್ತಿದ್ದ ಪರ್ಮಿಂದರ್‌ ಸಿಂಗ್‌ ಬಂಧನ

Pinterest LinkedIn Tumblr
RPT--Nabha: Rapid Action Force men at Nabha Central Jail, which was stormed by armed men who helped in escaping five terrorists including Khalistan Liberation Front chief Harminder Mintoo, in Nabha on Sunday. PTI Photo(STORY DEL2, 28) (PTI11_27_2016_000101B)
Nabha: 

ಲಖನೌ: ಪಂಜಾಬ್‌ನ ನಭ ಜೈಲು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಜೈಲಿನ ಮೇಲೆ ದಾಳಿ ನಡೆಸಲು ಬಳಸಿದ್ದ ಎಸ್‌ಯುವಿಯನ್ನು ಚಲಾಯಿಸುತ್ತಿದ್ದ ಪರ್ಮಿಂದರ್‌ ಸಿಂಗ್‌ ಎಂಬಾತನನ್ನು ಶಾಮ್ಲಿ ಜಿಲ್ಲೆಯ ಕೈರಾಣಾ ಪೊಲೀಸ್‌ ವೃತ್ತ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.

‘ಜೈಲು ದಾಳಿಗೆ ಬಳಸಿದ್ದ ಎಸ್‌ಯುವಿಯ ಚಲನವಲನದ ಮಾಹಿತಿ ಪಡೆದು ಆತನನ್ನು ಬಂಧಿಸಲಾಗಿದೆ’ ಎಂದು ಉತ್ತರ ಪ್ರದೇಶದ ಡಿಜಿಪಿ ಜಾವೀದ್‌ ಅಹ್ಮದ್‌ ತಿಳಿಸಿದ್ದಾರೆ.

ಬಂಧಿಸಲಾಗಿರುವ ಪರ್ಮಿಂದರ್‌ ಸಿಂಗ್‌ ಮಾರ್ಚ್‌ ತಿಂಗಳಲ್ಲಿ ನಭ ಜೈಲಿನಿಂದ ತಪ್ಪಿಸಿಕೊಂಡಿದ್ದ. ಜೈಲಿನ ಮೇಲಿನ ದಾಳಿ ಪೂರ್ವಯೋಜಿತ ಕೃತ್ಯ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ ನಭ ಜೈಲಿನ ಮೇಲೆ ದಾಳಿ ನಡೆಸಿದ್ದ 10ಕ್ಕೂ ಹೆಚ್ಚು ಮಂದಿ ಬಂದೂಕುಧಾರಿಗಳು ಖಲಿಸ್ತಾನ್‌ ಲಿಬರೇಷನ್‌ ಫೋರ್ಸ್‌ನ (ಕೆಎಲ್‌ಎಫ್‌) ಮುಖ್ಯಸ್ಥ ಹರ್ಮಿಂದರ್‌ ಸಿಂಗ್‌ ಮಿಂಟೂ ಸೇರಿದಂತೆ ಆರು ಮಂದಿಯನ್ನು ಜೈಲಿನಿಂದ ಬಿಡಿಸಿಕೊಂಡು ಪರಾರಿಯಾಗಿದ್ದರು.

Comments are closed.