ಬೆಳಗಾವಿ: ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಹಾಲಿನ ಪುಡಿ ಬದಲು ಟೆಟ್ರಾಪ್ಯಾಕ್‌ನಲ್ಲಿ ಸಂಸ್ಕರಿತ ನಂದಿನಿ ಹಾಲು ವಿತರಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶನಿವಾರ ವಿಭಾಗಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಈಗ ಶಾಲೆಗಳಿಗೆ ಹಾಲಿನ ಪುಡಿ ವಿತರಿಸಲಾಗುತ್ತಿದೆ. ಮುಂದಿನ ವರ್ಷದಿಂದ 150 ಮಿಲಿ ಲೀಟರ್ ಹಾಲನ್ನು ಟೆಟ್ರಾಪ್ಯಾಕ್‌ಗಳಲ್ಲಿ ನೀಡಲಾಗುವುದು. ಕೇಸರಿ, ಬದಾಮ ಸೇರಿದಂತೆ ವಿವಿಧ ಸ್ವಾದಗಳನ್ನು ಈ ಹಾಲು ಹೊಂದಿರುತ್ತದೆ ಎಂದು ಅವರು ವಿವರಿಸಿದರು.
ಪ್ರಸ್ತುತ ವಾರದಲ್ಲಿ 3 ದಿನ ಮಾತ್ರ ಹಾಲು ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಐದು ದಿನ ಹಾಲು ನೀಡಲಾಗುವುದು. ಪ್ರತಿ ವಿಭಾಗದ ಕೆಎಂಎಫ್ ಡೇರಿಯಲ್ಲಿ ಟೆಟ್ರಾ ಪ್ಯಾಕೇಜಿಂಗ್ ಘಟಕ ಸ್ಥಾಪಿಸುತ್ತಿದ್ದು, ಇಲ್ಲಿಂದಲೇ ಟೆಟ್ರಾ ಪ್ಯಾಕ್ ಸಿದ್ಧಪಡಿಸಿ, ಶಾಲೆಗಳಿಗೆ ಪೂರೈಸಲಾಗುವುದು ಎಂದು ಎ.ಮಂಜು ಅವರು ವಿವರಿಸಿದರು.
Comments are closed.