ಮುಂಬೈ

ಬ್ಯಾಂಕ್ ಕ್ಯೂನಲ್ಲಿ ಮಾಜಿ ಪ್ರಿಯಕರನಿಗೆ ಥಳಿತ

Pinterest LinkedIn Tumblr

hit-beatಮುಂಬೈ: ಹಳೇ ನೋಟುಗಳ ಬದಲಾವಣೆಗಾಗಿ ಬ್ಯಾಂಕ್ ಗಳ ಮುಂದೆ ಉದ್ದುದ್ದ ಕ್ಯೂ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕ್ಯೂನಲ್ಲಿ ಕೈ ಕೊಟ್ಟು ಹೋಗಿದ್ದ ಮಾಜಿ ಪ್ರೇಮಿ ಸಿಕ್ಕಾಗ ಯುವತಿಗೆ ಏನಾಗಿರಬೇಕು? ಮುಂದೆ ನಡೆದಿದ್ದು ದೊಡ್ಡ ರಾದ್ದಾಂತ.
ನಾಸಿಕ್ ನ ತ್ರಿಂಬಕ್ ರೋಡ್ ನಲ್ಲಿರುವ ಬ್ಯಾಂಕ್ ನ ಕ್ಯೂನಲ್ಲಿ ಕಳೆದ ಸೋಮವಾರ 35 ವರ್ಷದ ಹಳೇ ಪ್ರೇಮಿ ನಿಂತಿದ್ದು ಅದೇ ಕ್ಯೂನಲ್ಲಿ 23 ವರ್ಷದ ಮಹಿಳೆಯೊಬ್ಬಳು ನಿಂತಿರುತ್ತಾಳೆ. ಕೌಂಟರ್ ನಲ್ಲಿ ಹಣ ಪಡೆದು ವಾಪಸ್ಸಾಗುತ್ತಿದ್ದಾಗ ಪರಿಚಯದ ಮುಖವನ್ನು ಕಂಡು ಹೌಹಾರಿದ್ದಾಳೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಾಜಿ ಗೆಳೆಯನನ್ನು ಕಂಡ ಕೂಡಲೇ ಮಹಿಳೆ ತನ್ನ ಸಹೋದರ ಮತ್ತು ತಂದೆಗೆ ಫೋನ್ ಮಾಡಿ ಕರೆಸಿದ್ದಾಳೆ. ಸ್ಥಳಕ್ಕೆ ಬಂದ ಮಹಿಳೆ ಕಡೆಯವರು ಮಾಜಿ ಬಾಯ್ ಫ್ರೆಂಡ್ ಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ದೂರಿನನ್ವಯ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್ 323, 504 ಮತ್ತು 506ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.

Comments are closed.