ರಾಷ್ಟ್ರೀಯ

ಮನಮೋಹನ್ ಸಿಂಗ್ ಅವಧಿಯಲ್ಲೇ ಹೆಚ್ಚು ಕಪ್ಪು ಹಣ ಸಂಗ್ರಹ: ಜೇಟ್ಲಿ

Pinterest LinkedIn Tumblr

jetlyನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧದಿಂದಾಗಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿ, ಜಿಡಿಪಿ ದರ ಶೇ 2ರಷ್ಟು ಕುಸಿಯಲಿದೆ ಎಂದಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೇಳಿಕೆಯನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅವರ ಅವಧಿಯಲ್ಲೇ ಅತಿ ಹೆಚ್ಚು ಕಪ್ಪು ಹಣ ಸಂಗ್ರಹವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ನೋಟ್ ನಿಷೇಧ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಎದುರೇ ನೋಟು ನಿಷೇಧದ ಕ್ರಮದ ಬಗ್ಗೆ ಬಲವಾಗಿ ಆಕ್ಷೇಪವ್ಯಕ್ತಪಡಿಸಿದರು. ನೋಟು ನಿಷೇಧದಿಂದಾಗಿ ಜನಸಾಮಾನ್ಯರು ಮತ್ತು ಸಣ್ಣ ವ್ಯಾಪಾರಿಗಳು ಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರದ ಕ್ರಮ ಐತಿಹಾಸಿಕ ಆರ್ಥಿಕ ನಿರ್ವಹಣಾ ವೈಫಲ್ಯ ಎಂದಿದ್ದರು. ಅಲ್ಲದೇ ಜಿಡಿಪಿ ಮೇಲೆ ಶೇ.2ರಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದ್ದರು.
ಮಾಜಿ ಪ್ರಧಾನಿ ಹೇಳಿಕೆಯನ್ನು ತಳ್ಳಿಹಾಕಿದ ಅರುಣ್ ಜೇಟ್ಲಿ, ಚರ್ಚೆಯಿಂದ ತಪ್ಪಿಸಿಕೊಳ್ಳಲು ಪ್ರತಿಪಕ್ಷಗಳು ಕಾರಣವನ್ನು ಹುಡುಕುತ್ತಿವೆ. ನೋಟುಗಳನ್ನು ರದ್ದು ಮಾಡಿರುವುದರಿಂದ ಧನಾತ್ಮಕ ಹಾಗೂ ಮಧ್ಯಮ ಮತ್ತು ದೀರ್ಘಕಾಲದ ಪರಿಣಾಮ ಬೀರಲಿದೆ ಎಂದರು.
ಇದೇ ವೇಳೆ ಮನಮೋಹ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಜೇಟ್ಲಿ, ಯುಪಿಎ ಅವಧಿಯಲ್ಲೇ ಕಾಳಧನಿಕರು ಅತಿ ಹೆಚ್ಚು ಕಪ್ಪು ಹಣ ಸಂಗ್ರಹಿಸಿದ್ದಾರೆ ಮತ್ತು ಅತಿ ಹೆಚ್ಚು ಹಗರಣಗಳು ನಡೆದಿದ್ದು ಅವರ ಅವಧಿಯಲ್ಲೇ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದರು.

Comments are closed.