ಮುಂಬೈ: ಟಾಟಾ ಗ್ರೂಪ್ ನ ಭಾರತೀಯ ಹೋಟೆಲ್ ಗಳ ಸ್ವತಂತ್ರ ನಿರ್ದೇಶಕರು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಸೈರಸ್ ಮಿಸ್ತ್ರಿ ಅವರ ಬೆಂಬಲಕ್ಕೆ ನಿಂತಿವೆ.
ಇಂದು ಬಾಂಬೆ ಹೌಸ್ ನಲ್ಲಿ ಸೈರಸ್ ಮಿಸ್ತ್ರಿ ನೇತೃತ್ವದಲ್ಲಿ ಭಾರತೀಯ ಹೋಟೆಲ್ ಗಳ ನಿರ್ದೇಶಕರ ಸಭೆ ನಡೆಯಿತು, ಈ ವೇಳೆ ಬಾಂಬೆ ಹೌಸ್ ಹೊರಗಡೆ ಮಾಧ್ಯಮ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ನಡುವೆ ತೀವ್ರ ಜಟಾಪಟಿಯೂ ನಡೆಯಿತು.
ಸಭೆಯ ನಂತರ ಹೋಟೆಲ್ ಗಳ ಸ್ವತಂತ್ರ ನಿರ್ದೇಶಕರು ತಮ್ಮ ಅಧ್ಯಕ್ಷರ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿರುವುದಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಮಿಸ್ತ್ರಿ ಅವರು ಸಭೆಯಲ್ಲಿ ಈ ವರ್ಷದ ವಾರ್ಷಿಕ ವಹಿವಾಟಿನ ಮೌಲ್ಯ ಮಾಪನ ಮಾಡಿದ್ದು, ಅವರು ತೆಗೆದುಕೊಂಡ ನಿರ್ಧಾರ, ಕಾರ್ಯತಂತ್ರಗಳ ಸೂಚನೆ ಬಗ್ಗೆ ಸ್ವತಂತ್ರ ನಿರ್ದೇಶಕರು ಸರ್ವಾನುಮತದಿಂದ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಸೈರಸ್ ಮಿಸ್ತ್ರಿ ಅವರ ನಾಯಕತ್ವದ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು ಎಂದು ಪ್ರಕಟಣೆ ತಿಳಿಸಿದೆ.
ಸೈರಸ್ ಮಿಸ್ತ್ರಿ ಅವರು ಟಾಟಾ ಸಮೂಹದಲ್ಲಿ ಪ್ರಮುಖ ಪಾಲುದಾರ ಸಂಸ್ಥೆಯಾಗಿರುವ ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿದ್ದು, ಟಾಟಾ ಸ್ಟೀಲ್, ಟಿಸಿಎಸ್ ಮತ್ತು ಟಾಟಾ ಮೋಟಾರ್ಸ್ ಹಾಗೂ ಗ್ರೂಪ್ ನ ಇತರೆ ಸಂಸ್ಥೆಗಳ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆದಿದ್ದಾರೆ.
ಮುಂಬೈ
Comments are closed.