ಕರಾವಳಿ

ಉಡುಪಿಯಲ್ಲಿ ಜೆ ನರ್ಮ ಬಸ್ ಘಟಕ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

Pinterest LinkedIn Tumblr

ಉಡುಪಿ: ಸುಗಮ ಸಂಚಾರಕ್ಕೆ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಸ್ಟೀಲ್ ಬ್ರಿಡ್ಜ್ ಅಗತ್ಯೆವಿದೆ. ಫೈ ಓವರ್ ಬೇಡ ಆನೋದು ಸರಿಯಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

udupi_ksrtc-nurm_bus-4 udupi_ksrtc-nurm_bus-5 udupi_ksrtc-nurm_bus-2 udupi_ksrtc-nurm_bus-1 udupi_ksrtc-nurm_bus-7 udupi_ksrtc-nurm_bus-6 udupi_ksrtc-nurm_bus-3

ಉಡುಪಿಯ ನಿಟ್ಟೂರು ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಜೆ. ನರ್ಮ್ ಬಸ್ ಘಟಕವನ್ನು ಉದ್ಘಾಟಿಸಿ ಮಾದ್ಯಮದೊಂದಿಗೆ ಮಾತನಾಡಿದರು. ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಬರೇ ಏರ್ ಪೋರ್ಟ್ ಗೆ ಹೋಗುವವರಿಗೆ ಲಾಭ ಆಗುತ್ತದೆ ಎಂಬ ಮಾತು ನಿಜವಲ್ಲ. ಗೋರಗುಂಟ್ಯಪಾಳ್ಯದಲ್ಲಿ ಫೈ ಓವರ್ ನಿರ್ಮಾಣ ಮಾಡಿದ್ದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಿದೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಕೂಡಾ ಟ್ರಾಫಿಕ್ ಕಡಿಮೆಯಾಗಲಿದೆ. ಇದನ್ನೇ ಬೇಡ ಆನೋದು ಸರಿಯಲ್ಲ ಎಂದರು.

ಇನ್ನು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾರಿಯ ವಿಚಾರದಲ್ಲಿ ಕೆಲವರ ಅಸಮಾಧನದ ಕುರಿತು ಮಾತನಾಡಿದ ಸಚಿವರು ಅದನ್ನ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಅದ್ಯಕ್ಷರು ನೋಡಿಕೊಳ್ಳುತ್ತಾರೆ ಎಂದರು. ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಸೂಕ್ತ ನಿರ್ದಾರ ಕೈಗೊಳ್ಳಲಿದ್ದಾರೆ ಎಂದು ಇದೇ ಸಂದರ್ಬದಲ್ಲಿ ಸಚಿವರು ತಿಳಿಸಿದರು.

Comments are closed.