ಒಮನ್ ರಾಜ ವಿಶ್ವದ ಶ್ರೇಷ್ಠ ನಾಯಕರೆನಿಸಿಕೊಂಡಿದ್ದಾರೆ. ಒಮನ್ ಸುಲ್ತಾನ್ (ರಾಜ) ಖಬೂಸ್ ಅಲ್ ಸೈ ದ್ ಅಲ್ ಸೈ ದ್ ಅವರನ್ನು ವಿಶ್ವಸಂಸ್ಥೆ ಘೋಷಿಸಿದೆ. ನ.2ರಂದು ವಿಶ್ವಸಂಸ್ಥೆ ಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ವಾರ್ಷಿಕ ಪರಿಶೀಲನಾ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.
ಪ್ರಸಿದ್ಧ ಅಂತಾರಾಷ್ಟ್ರೀಯ ನಾಗರಿಕ ಸೇವೆಗಳ ಸಂಘಟನೆಗಳ ತಜ್ಞರು ಮತ್ತು ವಿಷಯ ಪರಿಣಿತರನ್ನು ಒಳಗೊಂಡ ತಾಂತ್ರಿಕ ಸಮಿತಿ ಖಬೂಸ್ ಅವರನ್ನು ಈ ಅತ್ಯುತ್ತಮ ಸ್ಥಾನಕ್ಕೆ ಆರಿಸಿದೆ. ಖಬೂಸ್ ಅವರು 1970ರಿಂದ ಒಮನ್ ನ ಆಡಳಿತ ನಡೆಸುತ್ತಿದ್ದಾರೆ. ಅವರ ಆಡಳಿತಾವಧಿಯಲ್ಲಿ ಒಮನ್ ವೇಗದ ಗತಿಯ ಅಭಿವೃದ್ಧಿ ಕಂಡಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಆಯ್ಕೆಯನ್ನು ಜಗತ್ತಿನ ಹಲವು ಮುಖಂಡರು ಸ್ವಾಗತಿಸಿದ್ದಾರೆ.
Comments are closed.