ಮನೋರಂಜನೆ

ಇಂದು ಬಿಗ್‌ಬಾಸ್‌ ಮನೆಯಿಂದ ಔಟ್ ಆಗಲಿರುವವರು ಯಾರು…? ಸಂಜನಾ ಇಲ್ಲವೇ ರೇಖಾ….?

Pinterest LinkedIn Tumblr

big

ಬಿಗ್‌ಬಾಸ್‌ ಮನೆಯಲ್ಲಿ ಮತ್ತೆ ಶನಿವಾರ ಬಂದಿದೆ. ಇಂದು ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗುವವರು ಯಾರು…? ಪ್ರತಿವಾರದಂತೆ ಪ್ರಥಮ್‌ ಮತ್ತು ಸಂಜನಾ ನಾಮಿನೇಟ್‌ ಆಗಿದ್ದು, ಉಳಿದಂತೆ ಶೀತಲ್‌ ಶೆಟ್ಟಿ, ನಟಿ ರೇಖಾ ಹಾಗು ಶಾಲಿನಿ ಹೊರಗೆ ಹೋಗುವ ರೆಸ್ ನಲ್ಲಿದ್ದಾರೆ.

ಬಿಗ್‌ಬಾಸ್‌ ಆರಂಭದಿಂದಲೂ ಪ್ರಥಮ್‌ಮತ್ತು ಸಂಜನಾ ನಾಮಿನೇಟ್‌ ಆಗುತ್ತಲೇ ಬಂದಿದ್ದು, ಮೊದಲಿಗೆ ವಾಣಿಶ್ರೀ , ಅನಂತರ ದೊಡ್ಡ ಗಣೇಶ್, ಬಳಿಕ ಚೈತ್ರ ಬಿಗ್‌ಬಾಸ್‌ ಮನೆಯಿಂದ ಔಟ್ ಆಗಿದ್ದಾರೆ. ಈ ಬಾರಿ ಬಿಗ್‌ಬಾಸ್‌ ಮನೆಯಿಂದ ಸಂಜನಾ ಇಲ್ಲವೇ ರೇಖಾ ಹೊರಹೋಗುದು ಖಚಿತವಾದಂತಿದೆ. ಭುವನ್ ನೊಂದಿಗೆ ಸದಾ ಕಾಲ ಮಾತನಾಡುತ್ತಿದ್ದ ಸಂಜನಾ ಈಗ ಭುವನ್ ನಿಂದ ದೂರ ಆಗಿದ್ದಾಳೆ. ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಡ್ಯಾನ್ಸ್ ಟಾಸ್ಕ್ ವೇಳೆ ಪ್ರಥಮ್ ನೊಂದಿಗೆ ಎದೆಗೆ ಕೈ ಯಿಂದ ಹೊಡೆದು ಕಿರಿಕ್ ಮಾಡಿಕೊಂಡಿದ್ದಳು. ಶುಕ್ರವಾರ ಸ್ವಿಮ್ಮಿಂಗ್ ಪೂಲ್ ಗೆ ನೀರು ತುಂಬಿಸುವ ವೇಳೆ ಗಾಯಗೊಂಡಿದ್ದಾಳೆ. ಮತ್ತೆ ರೇಖಾ ಅಷ್ಟಾಗಿ ಬಿಗ್‌ಬಾಸ್‌ ಮನೆಯಲ್ಲಿ ಚುರುಕಿನಿಂದ ಆಟ ಆಡುತ್ತಿಲ್ಲ. ಏಕಾಂಗಿ ಆಗಿಬಿಟ್ಟಿದ್ದಾಳೆ. ಇವರಿಬ್ಬರಲ್ಲಿ ಒಬ್ಬರು ಬಿಗ್‌ಬಾಸ್‌ ಮನೆಯಿಂದ ಔಟ್ ಆಗಲಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯವು ಕೂಡ ಆಗಿದೆ.

ಕಳೆದ ವಾರ ಶಾಲಿನಿ ಹಾಗು ಪ್ರಥಮ್ ಮಧ್ಯೆ ನಡೆದ ಕಾದಾಟದಿಂದ ಬಿಗ್‌ಬಾಸ್‌ ಮನೆ ಗೊಂದಲದ ಗೂಡಾಗಿತ್ತು. ಬಳಿಕ ಮನೆಯ ಕ್ಯಾಪ್ಟನ್‌ ಆಗಿರುವ ಮಾಳವಿಕಾಗೆ ಬಿಗ್‌ಬಾಸ್‌ ವಿಶೇಷ ಅಧಿಕಾರವೊಂದನ್ನು ನೀಡಿದ್ದ ಹಿನ್ನೆಲೆಯಲ್ಲಿ ಅವರು ಶಾಲಿನಿಯವರನ್ನು ನೇರವಾಗಿ ನಾಮಿನೇಟ್‌ಮಾಡಿದ್ದರು.

ಈ ವಾರವೂ ಬಿಗ್‌ಬಾಸ್‌ ಮನೆ ಹಲವಾರು ಘಟನೆಗಳು, ಕೂಗಾಟ, ಚೀರಾಟ ಎಲ್ಲವೂ ನಡೆಯಿತು. ಎಲ್ಲರಿಗೂ ಮತ್ತೆ ಪ್ರಥಮ್ ಖಳನಾಯಕನಾಗಿಯೇ ಉಳಿದುಬಿಟ್ಟಿದ್ದಾರೆ. ಪ್ರಥಮ್ ಅವರೊಂದಿಗೆ ಓಂ ಪ್ರಕಾಶ್, ಕೀರ್ತಿ, ಮೋಹನ್, ಮಾಳವಿಕಾ, ರೇಖಾ ಸೇರಿದಂತೆ ಬಹುತೇಕರು ಈ ಬಾರಿಯೂ ಒಂದಲ್ಲ ಒಂದು ವಿಷಯಕ್ಕೆ ಕಿತ್ತಾಡಿದ್ದಾರೆ.

ಶನಿವಾರ ರಾತ್ರಿ ಕಿಚ್ಚ್ ಸುದೀಪ್ ಅವರೊಂದಿಗೆ ಮಾತುಕತೆಯ ಸಂದರ್ಭದಲ್ಲಿ ಓಂ ಪ್ರಕಾಶ್, ಕೀರ್ತಿ, ಮೋಹನ್, ಮಾಳವಿಕಾ ಮೊದಲಾದವರು ಪ್ರಥಮ್ ವಿರುದ್ಧ ದೂರು ನೀಡಲು ತೆರೆಮರೆಯಲ್ಲಿ ಕಸರತ್ತು ಮಾಡುತ್ತಿದ್ದಾರೆ. ಆದರೆ ಪ್ರಥಮ್ ಮಾತ್ರ ಇನ್ನು ಮುಂದೆ ತಾನು ಮನೆಯಲ್ಲಿ ಯಾರೊಂದಿಗೂ ಕಿತ್ತಾಡಲ್ಲ ಎಂಬ ಶಪಥ ಮಾಡಿಕೊಂಡಿದ್ದಾರೆ.

Comments are closed.