
ಅರ್ಜೆಟೀನಾ: ರಾತ್ರಿ ವೇಳೆ ಚೂರೆ ಚೂರು ಮದ್ಯ ಸೇವಿಸಿದರೆ ಆಕೆಯ ಮನಃಸ್ಥಿತಿ ಹೇಗಿರುತ್ತದೆ ಎಂಬ ವಿಷಯದ ಮೇಲೆ ರಚಿಸಿರುವ ಹಾಡು ಕೇಳುತ್ತಾ, ಅರ್ಜೆಟೀನಾದ ಬ್ಯುನೊಸ್ ಐರಿಸ್ನ ಮಹಿಳೆಯೊಬ್ಬಳು ಹಾಡಹಗಲೇ ಬೆತ್ತಲಾಗಿ ಕಾರು ಓಡಿಸಿದ್ದಾಳೆ.
ಆಕೆ ಬರೀ ಕಾರನ್ನಷ್ಟೇ ಓಡಿಸಿಲ್ಲ ತಾನು ಬೆತ್ತಲಾಗಿ ಕಾರು ಓಡಿಸುತ್ತಿರುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಕೂಡ ಮಾಡಿದ್ದಾಳೆ. ಮೇಲುಡುಪು ಧರಿಸದೇ “ಮರಾಮ’ ಎಂಬ ಹಾಡನ್ನು ಹಾಕಿಕೊಂಡು ಡಾನ್ಸ್ ಮಾಡುತ್ತಾ ಕಾರು ಓಡಿಸುತ್ತಿದ್ದಳು. ಈ ಲೋಕದ ಪರಿವೆಯೇ ನನಗಿಲ್ಲ. ಯಾರು ಏನು ಅಂದುಕೊಂಡರೂ ನನಗೆ ಸಂಬಂಧವಿಲ್ಲ ಎಂಬಂತಿತ್ತು ಆಕೆಯ ವರ್ತನೆ. ಆಕೆಯನ್ನು ನೋಡಿ ಆಶ್ಚರ್ಯ ಸೂಚಿಸುವವರ ಕಡೆ ಕೈಬೀಸಿ ಅದೇ ಗತ್ತಿನಲ್ಲಿ ಮುಂದೆ ಸಾಗುತ್ತಿದ್ದಳು. ಈಕೆ ತಾನು ಮಾಡಿದ ವೀಡಿಯೋವನ್ನು ತನ್ನ ಸ್ನೇಹಿತರೊಬ್ಬರಿಗೆ ವಾಟ್ಸ್ ಆಪ್ನಲ್ಲಿ ಹಂಚಿಕೊಂಡಿದ್ದಳು. ಆದು ಅರ್ಜೆಂಟೀನಾದ ತುಂಬಾ ವೈರಲ್ ಆಗಿತ್ತು. ಆದರೆ ಆಕೆ ಎಲ್ಲಿಯೂ ಟ್ರಾಫಿಕ್ ನಿಯಮಗಳನ್ನು ಮುರಿದಿರಲಿಲ್ಲ!
Comments are closed.