ಮುಂಬೈ: ದೀಪಾವಳಿ ಹಬ್ಬದ ಈ ಸಮಯದಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕೆಲವೊಂದು ಬಾರಿ ಅದರ ವರ್ತನೆಯಿಂತ ಜನರನ್ನು ಭಯಭೀತರನ್ನಾಗಿಸುತ್ತದೆ, ಇದಕ್ಕೆ ಸಾಕ್ಷಿಯಾಗಿ ಮಹಾರಾಷ್ಟ್ರದ ಕರ್ಜಾ ಗ್ರಾಮದ ಮನೆಯೊಂದರಲ್ಲಿ ಹಾವೊಂದು ಸಿಲಿಂಡರ್‍ನೊಳಗೆ ಸಿಲುಕಿ ಕೆಲ ಕಾಲ ಮನೆಯವರನ್ನು ಆತಂಕ್ಕೀಡುಮಾಡಿದ ಘಟನೆ ಶುಕ್ರವಾರ ವರದಿಯಾಗಿದೆ.
ಹೌದು. ಮನೆಯ ಗೃಹಣಿ ಎಂದಿನಂತೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕೆಗೆ ಶಬ್ದವೊಂದು ಕೇಳಿಸುತ್ತದೆ. ಆದರೆ ಆಕೆ ಸಿಲಿಂಡರ್ ನಲ್ಲಿ ಗ್ಯಾಸ್ ಲೀಕ್ ಆಗಿರಬಹುದೋ ಅಥವಾ ಪೈಪ್ ನಲ್ಲಿ ಸಣ್ಣ ತೂತುಗಳಾಗಿ ಗ್ಯಾಸ್ ಲೀಕ್ ಆಗಿದೆಯೇನೋ ಎಂಬುವುದಾಗಿ ಭಾವಿಸಿ ಪರಿಶೀಲಿಸುತ್ತಾಳೆ. ಆದರೆ ಅಂತಹ ಯಾವುದೇ ಕುರುಹುಗಳು ಆಕೆಗೆ ಸಿಗಲಿಲ್ಲ. ಆದರೆ ಮತ್ತೆ ಅದೇ ಶಬ್ದ ಆಕೆಯನ್ನು ಭಯಭೀತಳನ್ನಾಗಿ ಮಾಡುತ್ತದೆ. ಈ ಶಬ್ದದಿಂದ ಭಯಗೊಂಡ ಆಕೆ ಕನೆಕ್ಷನ್ ತೆಗೆದಿಡುತ್ತಾಳೆ.
ಬಳಿಕ ಸಿಲಿಂಡರಿನ ಸುತ್ತಮುತ್ತ ಚೆಕ್ ಮಾಡಿದಾಗ ಆಕೆಗೆ ಕಂಡಿದ್ದು, ಬುಸುಗುಡುತ್ತಿದ್ದ ನಾಗರ ಹಾವು. ಸಿಲಿಂಡರಿನ ಕೆಳಗಡೆ ಇರುವ ತೂತುಗಳಲ್ಲಿ ಹಾವು ಸಿಕ್ಕಿಹಾಕಿಕೊಂಡಿದ್ದು, ಹೊರಬರಲಾದೇ ಪರದಾಡುತ್ತಿತ್ತು. ಈ ನೋವಿಗೆ ಅದು ಬುಸುಗುಡುತ್ತಿದ್ದು. ಇದನ್ನು ಕಂಡ ಗೃಹಣಿ ಕೂಡಲೇ ಹಾವಾಡಿಗರಿಗೆ ಕರೆ ಮಾಡಿ ಹಾವು ಇರುವ ವಿಚಾರವನ್ನು ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕಾಗಮಿಸಿದ ಹಾವಾಡಿಗ ಹಾವನ್ನು ಸಿಲಿಂಡರ್ ಹಂಡೆಯ ತೂತುಗಳಿಂದ ಬಿಡಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಹಾವು ಹೇಗೆ ಮನೆಯೊಳಗೆ ಬಂತು? ಹೇಗೆ ಸಿಲಿಂಡರ್ ತೂತುಗಳೊಳಗೆ ಸಿಲುಕಿತ್ತು? ಮುಂತಾದ ಪ್ರಶ್ನೆಗಳನ್ನು ಸ್ಥಳೀಯರು ಹಾವಾಡಿಗನ ಮುಂದಿರಿಸಿದರು. ಈ ವೇಳೆ ಆತ ಹಾವುಗಳು ತಂಪು ಜಾಗಗಳಲ್ಲಿ ಹೆಚ್ಚಾಗಿ ಇರುತ್ತವೆ. ಅವುಗಳಿಗೆ ಸೂರ್ಯನ ಶಾಖವನ್ನು ತೆದುಕೊಳ್ಳುವ ಶಕ್ತಿ ಇರುವುದಿಲ್ಲ. ಹೀಗಾಗಿ ಅವುಗಳು ತಂಪಾದ ಜಾಗಗಳನ್ನು ಅರಸಿಕೊಂಡು ಬರುತ್ತವೆ. ಅಂತೆಯೇ ಮನೆಯೊಳಗೆ ನುಗ್ಗಿದ್ದು, ಸಿಲಿಂಡರ್ ನೊಳಗೆ ಸಿಲುಕಿಕೊಂಡಿದೆ ಎಂಬುವುದಾಗಿ ವಿವರಿಸಿದ್ದಾನೆ.