ಕರ್ನಾಟಕ

ಈಗ ರಾಗಿ ಬಲು ದುಬಾರಿ

Pinterest LinkedIn Tumblr

ragiಬೆಂಗಳೂರು: ಜನರ ದಿನನಿತ್ಯದ ಆಹಾರವಾದ ರಾಗಿಯ ಬೆಲೆ ಏರಿಕೆ ಕಂಡಿದೆ. ರಾಗಿಯನ್ನು ಬಳಸುವ ಜನರು ಹೆಚ್ಚಾಗಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ದಿಢೀರನೆ ದರ ಏರಿಕೆ ಕಂಡು ಬಂದಿದೆ.

ಮೊದಲ ಬಾರಿಗೆ ಕೆಜಿಗೆ ರಾಗಿಯ ದರ 10 ರೂ.ಯಿಂದ 15 ರೂ.ಗೆ ಏರಿಕೆಯಾಗಿದೆ. ಕೆಜಿಗೆ 25 ರೂ. ಇದ್ದ ರಾಗಿ ದರ ಈಗ 40 ರೂ.ಗೆ ಏರಿದೆ. ಎಪಿಎಂಸಿಯಲ್ಲಿಯೇ 15 ರೂ. ಏರಿಕೆಯಾಗಿರೋದ್ರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಇನ್ನಷ್ಟು ಹೆಚ್ಚಳವಾಗಲಿದೆ ಮಾರುಕಟ್ಟೆಯ ವಿಶ್ಲೇಷಕರು ತಿಳಿಸಿದ್ದಾರೆ.

ಈ ಬಾರಿ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ರಾಗಿಯ ಉತ್ಪಾದನೆಯ ಪ್ರಮಾಣ ಸಹ ಕುಂಠಿತಗೊಂಡಿದೆ. ಪಂಜಾಬ್ ಮತ್ತು ಮಂಗಳೂರಿನ ಭಾಗದ ಜನರು ಈಗ ರಾಗಿ ತಿನ್ನಲು ಆರಂಭಿಸಿದ್ದರಿಂದ ರಾಗಿಗೆ ಬೇಡಿಕೆ ಹೆಚ್ಚಾಗಿದೆ.

Comments are closed.