ರಜತ ಮಹೋತ್ಸವ ಸಂಭ್ರಮದಲ್ಲಿರುವ ಮುಂಬಯಿ ಸಾಹಿತ್ಯ ಬಳಗವು ಬಿಲ್ಲವರ ಅಸೋಸಿಯೇಷನ್ ಸಹಯೋಗದೊಂದಿಗೆ 22-10-2016 ಮತ್ತು 23-10-2016 ರಂದು ಆಯೋಜಿಸಿದ ವೈಜ್ಞಾನಿಕ ನೆಲೆಯಲ್ಲಿ ಧಾರ್ಮಿಕ ಚಿಂತನೆ ,ಮೂಲ ನಂಬಿಕೆ-ಮೂಡ ನಂಬಿಕೆ ಎಂಬ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಎರಡನೆಯ ದಿನ ತುಳುನಾಡಿನ ಭೂತಾರಾಧನೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನೆಲಮಂಗಲ ಸರ್ಕಾರಿ ಪಿಯು ಕಾಲೇಜ್ ಉಪನ್ಯಾಸಕಿ ,ತುಳು ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ “ತುಳುವರ ಭೂತಪದಕ್ಕೆ ಪವಿತ್ರವಾದದ್ದು ಎಂಬ ಅರ್ಥವಿದ್ದು, ಇದು ದೇವತವಾಚಿ ಪದವಾಗಿದೆ.ದೈವ ,ದೇವರು,ದೈವ ಮೂರು ಕೂಡ ಒಂದೇ ಭಾವವನ್ನು ಧ್ವನಿಸುತ್ತವೆ ,ಇವು ಬೇರೆ ಬೇರೆಯಲ್ಲ.ತುಳುನಾಡಿನಲ್ಲಿ ದೈವತ್ವ ಪಡೆಯುವುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ.ಇಲ್ಲಿ ಅನೇಕ ಬ್ರಾಹ್ಮಣರು ,ಮುಸ್ಲಿಮರು,ಜೈನರು,ಕ್ರಿಶ್ಚಿಯನರು ಕೂಡ ದೈವಗಳಾಗಿದ್ದಾರೆ.ಅಂತೆಯೇ ಅನೇಕ ಕನ್ನಡಿಗರು,ವಿದೇಶಿ ವ್ಯಕ್ತಿಗಳೂ ದೈವತ್ವ ಪಡೆದು ಭೂತಗಳಾಗಿ ಆರಾಧಿಸಲ್ಪಡುತ್ತಿದ್ದಾರೆ.
ಇಲ್ಲಿ ಎಲ್ಲ ಜಾತಿ ಧರ್ಮದ ಜನರು ಭೂತಗಳನ್ನು ನಂಬಿ ಆರಾಧಿಸುತ್ತಾರೆ..ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ.ದುರಂತ ಮತ್ತು ದೈವತ್ವ ಭೂತಾರಾಧನೆಯ ಅವಿಭಾಜ್ಯ ಅಂಗಗಳು” ಎಂದು ಹೇಳಿದರು .ಭೂತ ಪದದ ವ್ಯುತ್ಪತ್ತಿ,ಭೂತಗಳ ವರ್ಗೀಕರಣ .ಸಂಖ್ಯೆ,ಭೂತಾರಾಧನೆಯ ವಿಧಿವಿಧಾನಗಳು .ವಿಧಗಳು,ಬಣ್ಣಗಾರಿಕೆ ವೇಷ ಭೂಷಣ ಸೇರಿದಂತೆ ಸಮಗ್ರ ಮಾಹಿತಿ ನೀಡಿರುವ ಅವರು ಕಚ್ಚೆ ಭಟ್ಟ,ಬವನೋ,ನೆಲ್ಲೂರಾಯ ,ಒರು ಬಾಣಿಯೆತ್ತಿ,ಬ್ರಾಣ ಭೂತ ಮಾಣಿ ಭೂತ ,ಅಡ್ಕತ್ತಾಯ,ಕಾರಿಂಜೆತ್ತಾಯಮೊದಲಾದ ಬ್ರಾಹ್ಮಣ ಮೂಲದ ದೈವಗಳು,ವಿದೇಶಿ ಮೂಲದ ಅರಬ್ ಭೂತ ಚೀನೀ ಭೂತ ಗಳು,ಆಲಿಭೂತ,ಮಾಪುಳೆ ಮಾಪುಲ್ತಿ ,ಬ್ಯಾರಿ ಭೂತ ಮೊದಲಾದ ಮುಸ್ಲಿಂ ಮೂಲದ ದೈವಗಳು.ಕುಲೆ ಭೂತಗಳು ಮೊದಲಾದ ವಿಶಿಷ್ಟ ದೈವಗಳ ಬಗ್ಗೆ ಸಚಿತ್ರ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಪ್ರಹ್ಲಾದಾಚಾರ್ಯ ನಾಗರಹಳ್ಳಿಯವರು ವಹಿಸಿದ್ದರು.ಕಾರ್ಯಕ್ರಮದ ರೂಪು ರೇಷೆ ಬಗ್ಗೆ ಸಾಹಿತ್ಯ ಬಳಗದ ಅಧ್ಯಕ್ಷರಾದ ಎಚ್ ಬಿ ಎಲ್ ರಾವ್ ಅವರು ಮಾತನಾಡಿದರು ಪಿ ಶ್ರೀಪತಿ ತಂತ್ರಿ,ಕೆ ಎಲ್ ಕುಂಡಂತಾಯ,ಗುರುರಾಜ್ ಸನಿಲ್ ಅಮಿತಾ ಭಾಗವತ್,ಪ್ರಕಾಶ್ ಎಲ್ ಶೆಟ್ಟಿ ಮೊದಲಾದ ವಿದ್ವಾಂಸರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು.
Comments are closed.