ಕರ್ನಾಟಕ

ಕೆಳದಿಯ ಬಸಪ್ಪ ನಾಯಕ ಸೇರಿದಂತೆ ಅನೇಕ ಅರಸರು ತುಳುನಾಡಿನ ಭೂತಗಳಾಗಿದ್ದಾರೆ-ಡಾ.ಲಕ್ಷ್ಮೀ ಜಿ ಪ್ರಸಾದ

Pinterest LinkedIn Tumblr

dsc00977

ಕರ್ನಾಟಕ ಇತಿಹಾಸ ಅಕಾಡೆಮಿಯು ಧಾರವಾಡ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆ,ಕರ್ನಾಟಕ ರಾಜ್ಯ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗಳ ಸಹಯೋಗದಲ್ಲಿ 22-10-2016 ರಿಂದ 24-10-2016 ರ ತನಕ ಆಯೋಜಿಸಿದ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮೊದಲ ದಿನದ ಪ್ರಥಮ ಗೋಷ್ಠಿಯಲ್ಲಿ “ತುಳುವರ ಭೂತಾರಾಧನೆಯಲ್ಲಿ ಇತಿಹಾಸದ ಎಳೆಗಳು “ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಕನ್ನಡ ಉಪನ್ಯಾಸಕಿ ,ತುಳು ಜಾನಪದ ಸಂಶೋಧಕಿ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ” ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಭೂತಾರಾಧನೆ ಎಂದರೆ ಕೇವಲ ಆರಾಧನಾ ಸಂಪ್ರದಾಯ ಮಾತ್ರವಲ್ಲ, ಇದು ತುಳುವ ಬದುಕಿಗೆ ಹಿಡಿಯುವ ಕೈಗನ್ನಡಿ ಕೂಡ .ತುಳುವರ ಭೂತಾರಾಧನೆಯಲ್ಲಿ ರಾಜಕೀಯ ,ಇತಿಹಾಸ ,ಸಂಸ್ಕೃತಿಗಳು ತಳಕು ಹಾಕಿಕೊಂಡಿವೆ ತುಳುವರ ಭೂತಗಳಾಗಿ ಆರಾಧಿಸಲ್ಪಡುವ ದೇಸಿಂಗ ಉಲ್ಲಾಕುಳು,ಬಸ್ತಿ ನಾಯಕ,ಕಪ್ಪಣ ಸ್ವಾಮಿ,ಬೋವ ದೈವಗಳು,ನೈದಾಲ ಪಾಂಡಿ,ಬಚ್ಚ ನಾಯಕ ಮೊದಲಾದವರು ಐತಿಹಾಸಿಕ ವ್ಯಕ್ತಿಗಳೇ ಆಗಿದ್ದಾರೆ.ಕೆಳದಿಯ ಬಸಪ್ಪ ನಾಯಕ ಬಸ್ತಿನಾಯಕನಾಗಿ,ಕುಂಬಳೆಯ ಜಯಸಿಂಹ ಅರಸ ದೇಸಿಂಗ ಉಳ್ಳಾಕುಲು ಎಂಬ ದೈವಗಳಾಗಿ ಆರಾಧನೆ ಪಡೆಯುತ್ತಾರೆ”ಎಂದು ಹೇಳಿದ್ದಾರೆ.

ಸಮ್ಮೇಳನವನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ|ಪ್ರಮೋದ್ ಭೀ ಗಾಯ್ ಉದ್ಘಾಟಿಸಿದರು ಹಿರಿಯ ಸಂಶೋಧಕರಾದ ಪ್ರೊ|ಶ್ರೀನಿವಾಸ್ ರಿತ್ತಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು .ಸಮ್ಮೇಳನದ ಸರ್ವಾಧ್ಯಕ್ಷರಾದ ಖ್ಯಾತ ಪುರಾತತ್ವವಿದರಾದ ಪ್ರೊ|ಪದ್ದಯ್ಯಅವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಾಡಿದರು ,ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ.ದೇವರ ಕೊಂಡಾ ರೆಡ್ಡಿಯವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

Comments are closed.