ಮುಂಬೈ

ಜಗತ್ತಿನ ಸೂಪರ್ ಎಕ್ಸ್‌ಪ್ರೆಸ್ ಕ್ಯಾಶಿಯರ್‌ ವೈರಲ್ ಆದ ವೀಡಿಯೋ ಒಮ್ಮೆ ನೋಡಿ

Pinterest LinkedIn Tumblr

ಪುಣೆ: ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಹಲವರು ಒಬ್ಬ ಮಹಿಳಾ ಕ್ಯಾಶಿಯರ್ ನಗದು ಲೆಕ್ಕ ಮಾಡುವುದು ಮತ್ತು ನಿಧಾನಗತಿಯಲ್ಲಿ ಹಣ ಠೇವಣಿ ಮಾಡುತ್ತಿರುವ ವೀಡಿಯೊ ನೋಡಿ ನಕ್ಕು ನಕ್ಕು ಸುಸ್ತಾಗಿದ್ದೇವೆ. ನಾವೆಲ್ಲರೂ ಇದನ್ನು ತಮಾಷೆಯೆಂದೇ ತಿಳಿದಿದ್ದೆವು. ಆನ್ಲೈನ್ನಲ್ಲಿ ಆಕೆಯನ್ನು ಹೀನಾಯವಾಗಿ ಹಾಸ್ಯ ಮಾಡಲಾಗಿತ್ತು.

ಆದರೆ ಇಲ್ಲೊಂದು ವಿಷಯವಿದೆ: ಇದು ನಿಜಕ್ಕೂ ತಮಾಷೆಯಲ್ಲ. ಈಗ ಸತ್ಯ ಬಹಿರಂಗವಾದ ಮೇಲೆ ನಾವೇ ಹೃದಯವಿಲ್ಲದ ಜನರಾಗಿ ಕಾಣುತ್ತಿದ್ದೇವೆ. ಜಗತ್ತಿನ ಅತೀ ವೇಗದ ಕ್ಯಾಶಿಯರ್‌ಎನ್ನುವ ವೀಡಿಯೊ ವೈರಲ್ ಆದ ಕೆಲವೇ ವಾರಗಳಲ್ಲಿ ಅವರು ಪುಣೆಯ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ಹಿರಿಯ ಬ್ಯಾಂಕರ್ ಎನ್ನುವುದು ತಿಳಿದದ್ದೇ ಅಲ್ಲದೆ, ಆಕೆಯ ಸ್ಫೂರ್ತಿದಾಯಕ ಕತೆಯೂ ಬಹಿರಂಗವಾಗಿದೆ.

ಸಾಮಾಜಿಕ ಕಾರ್ಯಕರ್ತ ಕುಂದನ್ ಶ್ರೀವಾಸ್ತ ಹೇಳುವ ಪ್ರಕಾರ ಕ್ಯಾಶಿಯರ್ ಪ್ರೇಮಲತಾ ಶಿಂದೆ ಎರಡು ಹೃದಯಾಘಾತ ಮತ್ತು ಒಂದು ಪ್ಯಾರಲಿಟಿಕ್ ಆಘಾತವನ್ನು ಎದುರಿಸಿದ್ದಾರೆ.

ವೀಡಿಯೊದಲ್ಲಿ ಅವರು ನಗದನ್ನು ಸ್ವೀಕರಿಸಿ ಅದನ್ನು ಲೆಕ್ಕ ಮಾಡಿ ಪಾಸ್ ಪುಸ್ತಕದಲ್ಲಿ ನಿಧಾನವಾಗಿ ಅಪ್ಡೇಟ್ ಮಾಡುವುದು ತೋರಿಸಲಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಪ್ರೇಮಲತಾ ನಿವೃತ್ತರಾಗಲಿದ್ದಾರಾದರೂ ಅವರ ಬಳಿ ಸಾಕಷ್ಟು ರಜೆ ಇದ್ದು, ನಿವೃತ್ತಿಯಾಗುವವರೆಗೂ ಮನೆಯಲ್ಲೇ ಕುಳಿತು ಪೂರ್ಣ ವೇತನ ಪಡೆಯುವ ಅವಕಾಶ ಅವರಿಗಿತ್ತು. ಆದರೆ ಗೌರವಯುತವಾಗಿ ತಮ್ಮ ಕೆಲಸ ಮುಗಿಸಬೇಕು ಎನ್ನುವುದು ಅವರ ನಿರ್ಧಾರವಾಗಿತ್ತು.

ಇದಕ್ಕಾಗಿ ಅವರ ಶಾಖೆ ಪ್ರೇಮಲತಾಗಾಗಿ ಹೆಚ್ಚುವರಿ ನಗದು ಕೌಂಟರ್ ಇಟ್ಟಿದ್ದರು. ವೀಡಿಯೊ ಶೂಟ್ ಮಾಡಿದ ವ್ಯಕ್ತಿಗೆ ಇದ್ಯಾವುದೂ ಗೊತ್ತಿಲ್ಲ. ಅಲ್ಲದೆ, ಪ್ರೇಮಲತಾರ ಪತಿ ನಿಧನರಾಗಿದ್ದಾರೆ. ಮಗ ವಿದೇಶದಲ್ಲಿರುವ ಕಾರಣ ತಮ್ಮ ಜೀವನವನ್ನು ಅವರು ಸ್ವತಃ ತೂಗಿಸಬೇಕಿದೆ.

ದಯವಿಟ್ಟು ಓದುಗರೆ ಈ ನ್ಯೂಸ್ನ್ನು ಓದಿದ ಮೇಲೆ ಅವರಿಗೆ ಯಾವುದೇ ಅವಹೇಳನಕಾರಿ ಕಮೇಂಟ್ ಮಾಡಬೇಡಿ ಬದಲಾಗಿ ಪೋತ್ಸಹಿಸಿ ಗೌರವಿಸಿ ಹಾಗೂ ಇತರಿಗೆ ಅವರು ಮಾದರಿಯಾಗಲಿ ಎಂದು ಹಾರೈಸಿ

ಕೃಪೆ: thenewsminute.com

Comments are closed.