ಕರ್ನಾಟಕ

ದೀಪಾವಳಿಯ ಸಂಭ್ರಮಾಚರಣೆಯಲ್ಲಿ ಪಟಾಕಿಯಿಂದ 40 ಮಕ್ಕಳ ಕಣ್ಣಿಗೆ ಗಾಯ

Pinterest LinkedIn Tumblr

gg

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಾಚರಣೆಯಲ್ಲಿ ಹಚ್ಚಿದ ಪಟಾಕಿಗೆ ನಗರದಲ್ಲಿ ನಿನ್ನೆ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ 35 ಕ್ಕೂ ಹೆಚ್ಚು ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ.

ಕಣ್ಣಿಗೆ ಹಾನಿ ಮಾಡಿಕೊಂಡವರಲ್ಲಿ ಬಹುತೇಕ ಮಕ್ಕಳೇ ಆಗಿದ್ದಾರೆ,ಮಿಂಟೋ ಆಸ್ಪತ್ರೆಯಲ್ಲಿ ವರುಣ್,ತೇಜಸ್ವಿನಿ,ಅಭಿಲಾಷ,ಕಿಶೋರ್ ಸೇರಿ ೮ ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ ಅವರಲ್ಲಿ ಇಬ್ಬರ ಕಣ್ಣಿಗೆ ಗಂಭೀರ ಪ್ರಮಾಣದಲ್ಲಿ ಹಾನಿಯಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ನಾರಾಯಣ ನೇತ್ರಾಲಯದ ರಾಜಾಜಿನಗರ ಎಂಜಿ ರಸ್ತೆ ಸೇರಿ ನಾಲ್ಕು ಆಸ್ಪತ್ರೆಗಳಲ್ಲಿ ಇಲ್ಲಿಯವರಗೆ ೩೬ ಮಂದಿ ಮಕ್ಕಳು ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡು ಎಲ್ಲರೂ ಮನೆಗೆ ಮರಳಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆಗೆ ಬಂದಿದ್ದ ಎಲ್ಲರೂ ದೃಷ್ಟಿಗೆ ಆಗಬಹುದಾದ ಹಾನಿಯಿಂದ ಪಾರಾಗಿದ್ದಾರೆ.

ಶೇಖರ್,ವಾಸನ್‌ಐ ಕೇರ್ ಅಗರ್‌ವಾಲ್ ಹಾಗೂ ರಂಗಶ್ರೀ ಕಣ್ಣಿನ ಆಸ್ಪತ್ರೆಯಲ್ಲಿ ೨೦ ಕ್ಕೂ ಮಂದಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ.ಚಿಕಿತ್ಸೆ ಪಡೆದುಕೊಂಡು ಬಹುತೇಕ ಮಂದಿ ಮನೆಗೆ ಮರಳಿದ್ದು ಇಬ್ಬರಿಗೆ ಮಾತ್ರ ಹೆಚ್ಚಿನ ಹಾನಿಯಾಗಿರುವುದರಿಂದ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಪಟಾಕಿಯಿಂದ ಕೈಮೈಗಳಿಗೆ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಗಂಭೀರವಾಗಿ ಗಾಯಗೊಂಡವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಬಲಿಪಾಡ್ಯಮಿಯಾದ ಇಂದು ದೀಪಾವಳಿ ಸಂಭ್ರಮವಿದ್ದು ನಾಳೆ ಗಾಯಗೊಳ್ಳುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

Comments are closed.