ಮುಂಬೈ

ಜಿಯೋದ ಕಥೆ ಹೇಳಿದ ಮುಕೇಶ್

Pinterest LinkedIn Tumblr

MUKESH_AMBANIಮುಂಬೈ: ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆದು ಹೊಸ ದಾಖಲೆ ಸೃಷ್ಟಿಸಿದ ಜಿಯೋ ಕಂಪೆನಿ ಹುಟ್ಟಲು ಕಾರಣ ಏನು ಎನ್ನುವುದನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಹಿರಂಗ ಪಡಿಸಿದ್ದಾರೆ.

ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮುಕೇಶ್ ಅಂಬಾನಿ ಜಿಯೋ ಹುಟ್ಟಲು ಮಗಳು ಈಶ ನೀಡಿದ ದೂರು ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: 26 ದಿನದಲ್ಲಿ 1 ಕೋಟಿ 60 ಲಕ್ಷ ಗ್ರಾಹಕರು: ಇದು ‘ಜಿಯೋ’ ರೆಕಾರ್ಡ್

2010ರಲ್ಲಿ ಮನಃಶಾಸ್ತ್ರ ಮತ್ತು ದಕ್ಷಿಣ ಎಷ್ಯಾ ಅಧ್ಯಯನದಲ್ಲಿ ಪದವಿ ಓದುತ್ತಿದ್ದ ಮಗಳು ಈಶಾ ಅಮೆರಿಕದಿಂದ ಮುಂಬೈಗೆ ಬಂದಿದ್ದಳು. ಈ ವೇಳೆ ವೇಗದ ಇಂಟರ್‍ನೆಟ್ ಸೇವೆ ಇಲ್ಲದ ಕಾರಣ ಆಕೆಯ ಅಧ್ಯಯನಕ್ಕೆ ತೊಡಕಾಗುತಿತ್ತು. ಆಕೆ ಅಮೆರಿಕದಲ್ಲಿ ವೇಗದ ಇಂಟರ್‍ನೆಟ್‍ನಿಂದ ಹೇಗೆ ಕೆಲಸ ನಡೆಯುತ್ತದೆ? ಸಿನಿಮಾ ಹೇಗೆ ವೀಕ್ಷಣೆ ಮಾಡುತ್ತೇವೆ ಎನ್ನುವುದನ್ನು ವಿವರಿಸಿದ್ದಳು. ಇಂಟರ್‍ನೆಟ್ ಸ್ಪೀಡ್ ಇಲ್ಲದ ಕಾರಣ ನನಗೆ ಹೋಮ್ ವರ್ಕ್ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಳು. ಈಕೆಯ ಈ ಮಾತುಗಳನ್ನು ಕೇಳಿ ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ವೇಗದ ಇಂಟರ್‍ನೆಟ್ ಸೇವೆ ನೀಡಲು ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟೆ ಎಂದು ವಿವರಿಸಿದರು.

ಉದ್ಯಮದಲ್ಲಿ ಜಿಯೋ ತಪ್ಪು ಮಾದರಿ ಅನುಸರಿಸಿದೆ ಎನ್ನವ ವಿಶ್ಲೇಷಣೆ ಇದೆ ಇದಕ್ಕೆ ಏನು ಹೇಳುತ್ತೀರಿ ಎಂದಿದ್ದಕ್ಕೆ, ವಿಶ್ವದಲ್ಲಿ ಹೊಸ ಹೊಸ ಅಲೋಚನೆಗಳು ತಲೆ ಎತ್ತುತ್ತಿವೆ. ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡುವ ಫಲಿತಾಂಶ ಹಣಕಾಸು ವಿಶ್ಲೇಷಕರಿಗೆ ಉತ್ತರ ನೀಡುತ್ತದೆ. ನಮ್ಮ ಮ್ಯಾನೇಜ್‍ಮೆಂಟ್ ನನ್ನ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.

Comments are closed.