ಮುಂಬೈ

ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಕೆಳಗಿಳಿಯುತ್ತಿದ್ದ ಸ್ಫೋಟಗೊಂಡ ಟಯರ್ ! ಪ್ರಯಾಣಿಕರು -ಸಿಬ್ಬಂದಿಗಳು ಅಪಾಯದಿಂದ ಪಾರು

Pinterest LinkedIn Tumblr

air-india

ಮುಂಬೈ: ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಹಮದಾಬಾದ್‍ನಿಂದ ಬಂದ ಏರ್ ಇಂಡಿಯಾ ವಿಮಾನ ಕೆಳಗಿಳಿಯುತ್ತಿದ್ದ ವೇಳೆ ವಿಮಾನದ ಟಯರ್ ಸ್ಫೋಟಗೊಂಡ ಘಟನೆ ವರದಿಯಾಗಿದೆ.

ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ವಿಮಾನದಲ್ಲಿ 128 ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಇದ್ದರು.

ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಸಂಸ್ಥೆಯ ವಕ್ತಾರ ಹೇಳಿದ್ದಾರೆ.

Comments are closed.