ಕರಾವಳಿ

ಹಿರಿಯ ಹವ್ಯಾಸಿ ತಾಳಮದ್ದಳೆ ಅರ್ಥಧಾರಿ ಸೀತಾರಾಂ ಕರುಣಾಕರ್‌ಗೆ ಸನ್ಮಾನ

Pinterest LinkedIn Tumblr

seetaram-sanmana_1

ಮಂಗಳೂರು : ಹಿರಿಯ ಹವ್ಯಾಸಿ ತಾಳಮದ್ದಳೆ ಅರ್ಥಧಾರಿ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಮಾಜಿ ಕಾರ್ಯದರ್ಶಿ ಶ್ರೀ ಸೀತಾರಾಂ ಕರುಣಾಕರ‌ ಅವರನ್ನು ಶ್ರೀ ಮಹಾಮಾಯಿದೇವಸ್ಥಾನ ಮಂಗಳೂರು ಇಲ್ಲಿ ನಡೆದ ನವರಾತ್ರಿ ವಿಶೇಷ ಯಕ್ಷಗಾನ ವೇದಿಕೆಯಲ್ಲಿ ಸಂಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಶ್ರೀ ಪ್ರದೀಪಕುಮಾರ ಕಲ್ಕೂರ‌ ಅವರು ಮಾತನಾಡಿ, ವಾಗೀಶ್ವರೀಯಕ್ಷಗಾನ ಸಂಘವು ನನ್ನ ಸಾರ್ವಜನಿಕ ಸೇವಾ ಜೀವನದ‌ಆರಂಭಕ್ಕೆಕಾರಣವಾದ ಪವಿತ್ರತಾಣ. ಕಳೆದ ಮೂವತ್ತು ವರ್ಷಗಳಿಂದ ನಾನು ಈ ಸಂಘದ ಬೆಳವಣಿಗೆಯನ್ನು ಕಂಡವನು. ಪ್ರತೀ ವರ್ಷಯಕ್ಷ ಸಾಧಕರನ್ನು ಸನ್ಮಾನಿಸುವ ಪರಂಪರೆ ಸ್ತುತ್ಯಾರ್ಹ ಎಂದು ನುಡಿದರು.

ಮಂಗಳೂರು ನಗರದ‌ ಅತೀ ಹಿರಿಯ ಯಕ್ಷಗಾನ ತಾಳಮದ್ದಳೆ ಸಂಘ ಎಂಬ ಕೀರ್ತಿ ಪಡೆದಿರುವ ಮಹಾಮಾಯಿ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘವು 1922ರಲ್ಲಿ ಸ್ಥಾಪಿಸಲ್ಪಟ್ಟಿದ್ದು ಈಗಲೂ ಪ್ರತೀ ಭಾನುವಾರ ವಾರದಕೂಟ ನಿರಂತರವಾಗಿ ಸಾಗುತ್ತಿದೆ. ದಿ| ಬಾಬು ಪಂಡಿತರು ಈ ಸಂಘದ ಸ್ಥಾಪಕಾಧ್ಯಕ್ಷರು. ದಿ| ಎನ್. ಮಾಧವಾಚಾರ್ಯರು ಈ ಸಂಘವನ್ನು ಯುವಕಲಾವಿದ ರೊಂದಿಗೆ ಸೇರಿ ಮುನ್ನಡೆಸಿದವರು. ಬಾಬು ಪಂಡಿತರ ಮೊಮ್ಮಗ ಸೀತಾರಾಂ ಅವರಿಗೆ ಈಗ 87ವರ್ಷ. ಇಳಿ ವಯಸ್ಸಿನಲ್ಲೂ ಯಕ್ಷಗಾನದ ಬಗ್ಗೆ ಆಸಕ್ತಿ ಉಳಿಸಿ ಬೆಳೆಸಿಕೊಂಡಿರುವ ನಿಜಾರ್ಥದ ಯಕ್ಷ ಸಾಧಕ‌ ಇವರು ‌ಎಂದು ಕದ್ರಿ ನವನೀತ ಶೆಟ್ಟಿಯವರು ಅಭಿನಂದಿಸಿದರು.

ಶತಮಾನೋತ್ಸವವನ್ನು‌ಅರ್ಥಪೂರ್ಣವಾಗಿ‌ಆಚರಿಸಲು ಸಂಘದ, ಕಲಾವಿದರಿಗೆ ಮಹಾಮಾಯೆ ಪೂರ್ಣಾನುಗ್ರಹ ನೀಡಲಿ ಎನ್ನುತ್ತಾ ಹಿರಿಯ ಕಲಾವೀದರ ಸ್ಮರಣೆಯನ್ನು ಸನ್ಮಾನಿತ ಸೀತಾರಾಮ್ ಅವರು ಮಾಡಿದರು.

ಯಕ್ಷಧ್ರುವ ಪಟ್ಲ ಪೌಂಡೇಶನ್‌ಟ್ರಸ್ಟ್‌ನ ಸಂಚಾಲಕ ಜಗದೀಶ್ ಶೆಟ್ಟಿ ಕಾರ್‌ಸ್ಟ್ರೀಟ್, ಉದ್ಯಮಿ ಶ್ರೀನಾಥ್ ಪ್ರಭು, ಮೋಕ್ತೇಸರ ಪಡುಬಿದ್ರೆ ಶ್ರೀನಿವಾಸ ಶೆಣೈ, ಶ್ರೀಕರ ಪ್ರಭು, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಾಗೇಶ್ ಪ್ರಭು ಸ್ವಾಗತಿಸಿದರು, ಸಂಜಯಕುಮಾರ ಪಡುಬಿದ್ರೆ ಕಾರ್ಯಕ್ರಮ ನಿರ್ವಹಿಸಿದರು.

Comments are closed.