ಕರಾವಳಿ

ಬ್ಯಾಸಾಸಂ ಅಧ್ಯಕ್ಷರಾಗಿ ಬಶೀರ್ ಬೈಕಂಪಾಡಿ ಪುನರಾಯ್ಕೆ

Pinterest LinkedIn Tumblr

basir_balikampady_pics_1

ಮಂಗಳೂರು, ಅಕ್ಟೋಬರ್.18 : ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘದ ಅಧ್ಯಕ್ಷರಾಗಿ ಮನಪಾ ಮಾಜಿ ಉಪ ಮೇಯರ್ ಬಶೀರ್ ಬೈಕಂಪಾಡಿ ಪುನರಾಯ್ಕೆಯಾಗಿದ್ದಾರೆ.

ಮಂಗಳವಾರ ಮಂಗಳೂರಿನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಯು.ಎ. ಕಾಸಿಂ ಉಳ್ಳಾಲ ಗೌರವಾಧ್ಯಕ್ಷ, ಇಬ್ರಾಹೀಮ್ ತನ್ನೀರುಬಾವಿ ಮತ್ತು ಖಾಲಿದ್ ತನ್ನೀರುಬಾವಿ ಉಪಾಧ್ಯಕ್ಷರು, ಉಮರ್ ಯು. ಹೆಚ್. ಪ್ರಧಾನ ಕಾರ್ಯದರ್ಶಿ, ಮುಹಮ್ಮದ್ ಕುಳಾಯಿ ಮತ್ತು ಮುಹಮ್ಮದ್ ಶರೀಫ್ ನಿರ್ಮುಂಜೆ ಕಾರ್ಯದರ್ಶಿಗಳು, ಹುಸೈನ್ ಕಾಟಿಪಳ್ಳ ಸಂಚಾಲಕ ಹಾಗೂ ಬಿ.ಎ‌ ಮುಹಮ್ಮದ್ ಅಲಿ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

Comments are closed.